ಪಠಾಣ್ ಚಿತ್ರದಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ 
ದೇಶ

'ಪಠಾಣ್'ಗೆ ಹತ್ತಾರು ವಿಘ್ನ: ಗುಜರಾತ್ ನಲ್ಲಿ ಬಜರಂಗ ದಳ, ವಿಹೆಚ್ ಪಿ ಕಾರ್ಯಕರ್ತರ ಪ್ರತಿಭಟನೆ, ಶಾರೂಕ್ ಪೋಸ್ಟರ್ ಹರಿದು ಹಾಕಿ ಆಕ್ರೋಶ

ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಈ ತಿಂಗಳಾಂತ್ಯಕ್ಕೆ ಬಿಡುಗಡೆಗೆ ಸಿದ್ದವಾಗಿರುವ 'ಪಠಾಣ್' ಚಿತ್ರಕ್ಕೆ ಮತ್ತೆ ವಿಘ್ನ ಎದುರಾಗಿದೆ. ಬೇಷರಂ ರಂಗ್ ಹಾಡಿನ ಬಿಡುಗಡೆಯಿಂದ ಆರಂಭವಾದ ವಿವಾದದ ಕಿಚ್ಚು ಇನ್ನೂ ತಣ್ಣಗಾಗಿಲ್ಲ, ದಿನಗಳೆದಂತೆ ಹೆಚ್ಚಾಗುತ್ತಿದೆ. 

ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಈ ತಿಂಗಳಾಂತ್ಯಕ್ಕೆ ಬಿಡುಗಡೆಗೆ ಸಿದ್ದವಾಗಿರುವ 'ಪಠಾಣ್' ಚಿತ್ರಕ್ಕೆ ಮತ್ತೆ ವಿಘ್ನ ಎದುರಾಗಿದೆ. ಬೇಷರಂ ರಂಗ್ ಹಾಡಿನ ಬಿಡುಗಡೆಯಿಂದ ಆರಂಭವಾದ ವಿವಾದದ ಕಿಚ್ಚು ಇನ್ನೂ ತಣ್ಣಗಾಗಿಲ್ಲ, ದಿನಗಳೆದಂತೆ ಹೆಚ್ಚಾಗುತ್ತಿದೆ. 

ಇಂದು ಜನವರಿ 5 ದೀಪಿಕಾ ಪಡುಕೋಣೆ 37ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಪಠಾಣ್ ಚಿತ್ರತಂಡ ಚಿತ್ರದ ಟ್ರೇಲರ್ ನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿತ್ತು. ಆದರೆ ಟ್ರೇಲರ್ ಬಿಡುಗಡೆಗೆ ಅವಕಾಶ ನೀಡಬಾರದೆಂದು ಬಿಜೆಪಿ ಮತ್ತು ವಿಹೆಚ್ ಪಿ ಕಾರ್ಯಕರ್ತರು ಸಿನೆಮಾ ಥಿಯೇಟರ್ ಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದ ಪೋಸ್ಟರ್, ಪ್ರಚಾರ ಸಾಮಗ್ರಿಗಳನ್ನು ಹರಿದುಹಾಕಿದ್ದಾರೆ.

ಈ ಘಟನೆ ನಡೆದಿದ್ದು ನಿನ್ನೆ ಅಹಮದಾಬಾದ್ ನ ವಸ್ತ್ರಾಪುರದ ಮಾಲ್ ನಲ್ಲಿ ಸಿನೆಮಾದ ಪ್ರಚಾರ ವೇಳೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಲ್ಫಾ ಒನ್ ಮಾಲ್ ನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಶಾರೂಕ್ ಖಾನ್ ಪೋಸ್ಟರ್ ನ್ನು ಹರಿದುಹಾಕಿದ್ದಾರೆ. ಚಿತ್ರ ಬಿಡುಗಡೆ ಮಾಡಿದರೆ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಪಠಾಣ್ ಚಿತ್ರ ಜನವರಿ 25ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT