ದೇಶ

'ಭಾರತದ ಡಿಜಿಟಲ್ ರೂಪಾಂತರವು ಸ್ಪೂರ್ತಿದಾಯಕವಾಗಿದೆ': ಪ್ರಧಾನಿ ಮೋದಿ ಭೇಟಿ ಮಾಡಿದ ಸತ್ಯ ನಡೆಲ್ಲಾ

Sumana Upadhyaya

ನವದೆಹಲಿ: ಮೈಕ್ರೋಸಾಫ್ಟ್ ಅಧ್ಯಕ್ಷ ಹಾಗೂ ಸಿಇಒ ಸತ್ಯ ನಡೆಲ್ಲಾ ಇಂದು ಗುರುವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಡಿಜಿಟಲ್ ರೂಪಾಂತರ ಆಧಾರಿತ ಸ್ಥಿರ ಮತ್ತು ಆಂತರಿಕ ಆರ್ಥಿಕ ಬೆಳವಣಿಗೆಯ ಮೇಲೆ ಭಾರತ ಗಮನ ಹರಿಸಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಸತ್ಯ ನಡೆಲ್ಲಾ ಹೇಳಿದ್ದಾರೆ.

ಒಳನೋಟವುಳ್ಳ ಭೇಟಿ ಮಾತುಕತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಭಾರತ ಸರ್ಕಾರದ ಆಳವಾದ ಸ್ಥಿರ, ಎಲ್ಲವನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ ಆಧಾರಿತ ಡಿಜಿಟಲ್ ರೂಪಾಂತರ ಮೇಲೆ ಗಮನ ಹರಿಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಡಿಜಿಟಲ್ ದೃಷ್ಟಿಕೋನದಲ್ಲಿ ಕೆಲಸ ಮಾಡಬೇಕೆನ್ನುವ ಭಾರತದ ಮಹದಾಸೆಗೆ ನಾವು ಒತ್ತು ನೀಡಲು ಸಹಕಾರ ನೀಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಸತ್ಯ ನಡೆಲ್ಲಾ ಪ್ರಧಾನಿ ಭೇಟಿಯ ನಂತರ ಟ್ವೀಟ್ ಮಾಡಿದ್ದಾರೆ.

ಕಳೆದ ಮಂಗಳವಾರ ಭಾರತಕ್ಕೆ ಆಗಮಿಸಿದ ನಡೆಲ್ಲಾ ಅವರು ನಿನ್ನೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿ ಡಿಜಿಟಲ್ ಕ್ಷೇತ್ರದಲ್ಲಿ ಆಡಳಿತ, ಭದ್ರತೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ನಿನ್ನೆ ಮುಂಬೈ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂದು ಮುಂಬೈಯಲ್ಲಿ ಮೈಕ್ರೋಸಾಫ್ಟ್ ಫ್ಯೂಚರ್ ರೆಡಿ ಲೀಡರ್ ಶಿಪ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. 

ಕ್ಲೌಡ್ ಮೂಲದ ಅಪ್ಲಿಕೇಶನ್ ನ್ನು ಕೆಲಸಗಳಲ್ಲಿ ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ದಕ್ಷತೆ ಮಾಡಬಹುದು. 2025ರ ವೇಳೆಗೆ ಕ್ಲೌಡ್ ಅಪ್ಲಿಕೇಶನ್ ಬಳಸಲು ತಯಾರಾಗಬಹುದು ಎಂದರು. ಮೈಕ್ರೋಸಾಫ್ಟ್ ಕಳೆದ 32 ವರ್ಷಗಳಿಂದ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. 

SCROLL FOR NEXT