ದೇಶ

ರಾಜ್ಯಪಾಲರನ್ನು ಟೀಕಿಸುವುದನ್ನು ನಿಲ್ಲಿಸಿ: ಡಿಎಂಕೆ ಶಾಸಕರಿಗೆ ತಮಿಳುನಾಡು ಸಿಎಂ ಸ್ಟಾಲಿನ್ ತಾಕೀತು

Lingaraj Badiger

ಚೆನ್ನೈ: ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ಆರ್‌ಎನ್ ರವಿ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಗಳವಾರ ತಮ್ಮ ಪಕ್ಷದ ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಇಂದು ಚೆನ್ನೈನಲ್ಲಿ ನಡೆದ ಶಾಸಕರ ಸಭೆಯಲ್ಲಿ ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಯಾವುದೇ ಪೋಸ್ಟರ್ ಹಾಕದಂತೆ ಸ್ಟಾಲಿನ್ ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ.

ಆಡಳಿತಾರೂಢ ಡಿಎಂಕೆ ಮತ್ತು ರಾಜಭವನದ ನಡುವಿನ ತಿಕ್ಕಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ರಾಜ್ಯಪಾಲ ರವಿ ಅವರು ಇತ್ತೀಚಿಗೆ, ತಮಿಳುನಾಡು ಹೆಸರನ್ನು 'ತಮಿಳಗಂ' ಎಂದು ಬದಲಿಸುವಂತೆ ಸಲಹೆ ನೀಡಿದ್ದರು. ಇದು ಸಹ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಮುಖ್ಯ ವಿರೋಧ ಪಕ್ಷ ಎಐಎಡಿಎಂಕೆ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ ನಂತರ ಇಂದು ಪಶ್ಚಿಮ ಚೆನ್ನೈನ ವಳ್ಳುವರ್ ಕೊಟ್ಟಂ ಮತ್ತು ಅಣ್ಣಾ ಸಲೈ ಪ್ರದೇಶಗಳಲ್ಲಿ 'ಗೆಟೌಟ್ ರವಿ' ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್ ನಲ್ಲಬೂ 'ಗೆಟೌಟ್ ರವಿ' ಟ್ರೆಂಡ್ ಆಗಿದೆ.

SCROLL FOR NEXT