ದೇಶ

ಸಣ್ಣ, ಮಧ್ಯಮ ಉದ್ಯಮಕ್ಕೆ ಉತ್ತೇಜನ ಸಿಕ್ಕರೆ ಲೂಧಿಯಾನ ಚೀನಾದೊಂದಿಗೆ ಸ್ಪರ್ಧಿಸಬಹುದು: ರಾಹುಲ್

Nagaraja AB

ಲೂಧಿಯಾನ: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೂಕ್ತ ಬೆಂಬಲ ನೀಡಿದರೆ ಲೂಧಿಯಾನ ಚೀನಾದೊಂದಿಗೆ ಸ್ಪರ್ಧಿಸಬಹುದು ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇವುಗಳನ್ನು ಉತ್ತೇಜಿಸುತ್ತಿಲ್ಲ ಎಂದು ಕೇಂದ್ರ ಮತ್ತು ಪಂಜಾಬ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಲೂಧಿಯಾನದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ,  ಬಿಜೆಪಿ ದೇಶದಲ್ಲಿ ದ್ವೇಷ, ಹಿಂಸಾಚಾರ ಮತ್ತು ಭಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು. ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಜಾಗ ಇರಬಾರದು. ಇದು ಸಹೋದರತ್ವ, ಪ್ರೀತಿ ಮತ್ತು ಗೌರವದ ದೇಶವಾಗಿದೆ ಎಂದರು. 

ನೋಟು ಅಮಾನ್ಯೀಕರಣದ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೀವ್ರ ಹೊಡೆತ  ಬಿದಿದ್ದೆ.  ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಅನುಷ್ಟಾನ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಕೊನೆಗೊಳಿಸುವ ಅಸ್ತ್ರಗಳಾಗಿವೆ ಎಂದು ಅವರು ಆರೋಪಿಸಿದರು. 

 ಕೋಟ್ಯಾಧಿಪತಿಗಳು ದೇಶಕ್ಕೆ ಉದ್ಯೋಗ ನೀಡಲು ಸಾಧ್ಯವಿಲ್ಲ, ಲೂಧಿಯಾನದ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ದೇಶದಲ್ಲಿ ಉದ್ಯೋಗವನ್ನು ನೀಡಬಹುದು. ಈ ಉದ್ಯಮಗಳನ್ನು ಬೆಂಬಲಿಸಿದರೆ ಲೂಧಿಯಾನ ಚೀನಾ ವಿರುದ್ಧ ಸ್ಪರ್ಧಿಸಬಹುದು.  ಇದೇ ಸತ್ಯ, ಆದರೆ ಯಾರೂ ಕೂಡಾ ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದರು.

 ಪಂಜಾಬ್ ಸರ್ಕಾರವೇ ಆಗಿರಲಿ ಅಥವಾ ಕೇಂದ್ರ ಸರ್ಕಾರವೇ ಆಗಿರಲಿ ಯಾರೂ ಕೂಡಾ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಲುಧಿಯಾನ ಪಂಜಾಬ್‌ನ ಕೈಗಾರಿಕಾ ಕೇಂದ್ರವಾಗಿದೆ ಎಂದು ತಿಳಿಸಿದರು. 

SCROLL FOR NEXT