ದೇಶ

ಉತ್ತರ ಪ್ರದೇಶ: ಅಮೇಥಿಯ ಕೊರ್ವಾ ಘಟಕದಲ್ಲಿ ಎಕೆ-203 ರೈಫಲ್‌ಗಳ ಉತ್ಪಾದನೆ ಆರಂಭ

Lingaraj Badiger

ಲಖನೌ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಕೊರ್ವಾದಲ್ಲಿರುವ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್‌(ಐಆರ್‌ಆರ್‌ಪಿಎಲ್)ನ ಉತ್ಪಾದನಾ ಘಟಕವು ಎಕೆ-203 ಕಲಾಶ್ನಿಕೋವ್ ಅಸಾಲ್ಟ್ ರೈಫಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಕಳೆದ ವಾರ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು 5,000 ಎಕೆ-203 ರೈಫಲ್‌ಗಳ ಮೊದಲ ಬ್ಯಾಚ್ ಅನ್ನು ಈ ವರ್ಷದ ಮಾರ್ಚ್‌ನೊಳಗೆ ಸೇನೆಗೆ ನೀಡಲಾಗುವುದು ಎಂದು ಹೇಳಿದ್ದರು.

ಅಮೇಥಿಯಲ್ಲಿರುವ ಕೊರ್ವಾ ಆರ್ಡನೆನ್ಸ್ ಕಾರ್ಖಾನೆಯು 7.62 ಎಂಎಂ ಕಲಾಶ್ನಿಕೋವ್ ಎಕೆ-203 ಆಕ್ರಮಣಕಾರಿ ರೈಫಲ್‌ಗಳ ಮೊದಲ ಬ್ಯಾಚ್ ಅನ್ನು ತಯಾರಿಸಿದೆ ಎಂದು ರಷ್ಯಾದ ಪಾಲುದಾರ ರೋಸೊಬೊರೊನೆಕ್ಸ್‌ಪೋರ್ಟ್‌ನ ಮಹಾನಿರ್ದೇಶಕ ಅಲೆಕ್ಸಾಂಡರ್ ಮಿಖೀವ್ ಹೇಳಿದ್ದಾರೆ.

ಎಕೆ-203 ರೈಫಲ್‌ಗಳ ಮೊದಲ ಬ್ಯಾಚ್ ಅನ್ನು ಶೀಘ್ರದಲ್ಲೇ ಭಾರತೀಯ ಸೇನೆಗೆ ತಲಪಿಸಲಾಗುವುದು ಎಂದು ಅಲೆಕ್ಸಾಂಡರ್ ಮಿಖೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಆರ್‌ಆರ್‌ಪಿಎಲ್ ಅನ್ನು ಭಾರತದ ಅಡ್ವಾನ್ಸ್‌ಡ್ ವೆಪನ್ಸ್ ಅಂಡ್ ಇಕ್ವಿಪ್‌ಮೆಂಟ್ ಇಂಡಿಯಾ ಲಿಮಿಟೆಡ್ (ಎಡಬ್ಲ್ಯುಇಐಎಲ್) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್(ಎಂಐಎಲ್) ಮತ್ತು ರೊಸೊಬೊರೊನೆಕ್ಸ್‌ಪೋರ್ಟ್(ಆರ್‌ಒಇ) ಮತ್ತು ರಷ್ಯಾದ ಕಲಾಶ್ನಿಕೋವ್ ಕನ್ಸರ್ನ್ 2019 ರಲ್ಲಿ ಜಂಟಿಯಾಗಿ ಸ್ಥಾಪಿಸಿವೆ.

SCROLL FOR NEXT