ದೇಶ

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ: ಮಕ್ಕಳೊಂದಿಗೆ ಇಂದು ಮೋದಿ ಸಂವಾದ, ಕರ್ನಾಟಕದ 8 ವರ್ಷದ ಬಾಲಕ ಆಯ್ಕೆ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ  ಪುರಸ್ಕೃತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಸಂವಾದ ನಡೆಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.

ನಾವೀನ್ಯತೆ, ಸಮಾಜ ಸೇವೆ, ಪಾಂಡಿತ್ಯಪೂರ್ಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ಶೌರ್ಯ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಭಾರತ ಸರ್ಕಾರವು ಮಕ್ಕಳಿಗೆ ಪ್ರತಿವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರಿಗೆ ಪದಕ, 1 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.

ಈ ವರ್ಷ, ದೇಶದಾದ್ಯಂತ 11 ಮಕ್ಕಳನ್ನು ಬಾಲ ಶಕ್ತಿ ಪುರಸ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ PMRBP-2023 ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಆರು ಹುಡುಗರು ಮತ್ತು ಐದು ಹುಡುಗಿಯರು ಸೇರಿದ್ದಾರೆ.

ಕರ್ನಾಟಕದ 8 ವರ್ಷದ ಬಾಲಕ ಆಯ್ಕೆ: "ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2023" ಪ್ರಶಸ್ತಿಗೆ ಕರ್ನಾಟಕದ 8 ವರ್ಷದ ಬಾಲಕ ರಿಷಿ ಶಿವ ಪ್ರಸನ್ನ ಆಯ್ಕೆಯಾಗಿದ್ದು, 180 ಐಕ್ಯೂ ಹೊಂದಿರುವ ಅತ್ಯಂತ ಕಿರಿಯ ಪ್ರಮಾಣೀಕೃತ ಆಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ ಬಾಲಕ ಎಂಬ ಹೆಗ್ಗಳಿಕೆ ಈತನದ್ದು. 

SCROLL FOR NEXT