ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ರಜೌರಿಯ ಥಾನಮಂಡಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವಾಹನವೊಂದು ಆಯತಪ್ಪಿ ಆಳವಾದ ಕಮರಿಗೆ ಉರುಳಿದೆ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭೀಕರ ವಿಡಿಯೋ: ಮಾರ್ನಿಂಗ್ ವಾಕಿಂಗ್ ಮಾಡುತ್ತಿದ್ದವರಿಗೆ ಗುದ್ದಿದ ಕಾರು; ತಾಯಿ-ಮಗಳ ಸಾವು, ಕಾರು ಬಿಟ್ಟು ಚಾಲಕ ಪರಾರಿ
ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಗಾಯಾಳುಗಳು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜೌರಿಯ ಜಿಎಂಸಿಯ ವೈದ್ಯಕೀಯ ಅಧೀಕ್ಷಕ ಡಾ ಮೆಹಮೂದ್ ಹುಸೇನ್ ಬಜಾರ್ ಅವರು ಮಾಹಿತಿ ನೀಡಿದ್ದಾರೆ.
ಮೃತರನ್ನು ಭಾಂಗೈ ನಿವಾಸಿಗಳಾದ ಶಮೀಮ್ ಅಖ್ತರ್ (55), ರುಬಿನಾ ಕೌಸರ್ (35), ಜರೀನಾ ಬೇಗಂ ಮತ್ತು ಮೊಹಮ್ಮದ್ ಯೂನಿಸ್ (38) ಎಂದು ಗುರುತಿಸಲಾಗಿದೆ. ಘಟನೆ ವೇಳೆ ವಾಹನದಲ್ಲಿ 12 ಮಂದಿ ಇದ್ದರು ಎಂದು ತಿಳಿದುಬಂದಿದೆ.