ಮಧ್ಯಪ್ರದೇಶದಲ್ಲಿ ಅನಾಗರಿಕ ಘಟನೆ: ಮೂತ್ರ ವಿಸರ್ಜನೆ ಮಾಡಲಾಗಿದ್ದ ವ್ಯಕ್ತಿಯ ಪಾದ ತೊಳೆದ ಸಿಎಂ ಚೌಹಾಣ್!
ಮಧ್ಯಪ್ರದೇಶದಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ದುರುಳನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಭೋಪಾಲ್: ಮಧ್ಯಪ್ರದೇಶದಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ದುರುಳನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಮೂತ್ರ ವಿಸರ್ಜನೆ ಮಾಡಲಾಗಿದ್ದ ವ್ಯಕ್ತಿಯ ಪಾದವನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತೊಳೆದಿದ್ದಾರೆ. ಬುಡಕಟ್ಟು ವ್ಯಕ್ತಿ ದಶಮತ್ ರಾವತ್ ಅವರನ್ನು ಸಿಎಂ ತಮ್ಮ ನಿವಾಸಕ್ಕೆ ಕರೆದೊಯ್ದು ಅವರ ಪಾದವನ್ನು ನೀರಿನಿಂದ ತೊಳೆದಿದ್ದಾರೆ.
ಇದನ್ನೂ ಓದಿ: ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ: ಆದಿವಾಸಿ ಯುವಕನ ಮೇಲೆ 'ಬಿಜೆಪಿ ವ್ಯಕ್ತಿ' ಮೂತ್ರ ವಿಸರ್ಜನೆ: ವಿಡಿಯೋ ವೈರಲ್
ಸಿದ್ಧಿ ಜಿಲ್ಲೆಯಲ್ಲಿ ನಿನ್ನೆ ವೈರಲ್ ಆದ ವೀಡಿಯೊದಲ್ಲಿ, ಆರೋಪಿ ಪ್ರವೇಶ್ ಶುಕ್ಲಾ, ರಾವತ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೋಡಿ ತುಂಬಾ ನೋವಾಗಿತ್ತು. ಅದಕ್ಕಾಗಿ ನಿನ್ನ ಕ್ಷಮೆ ಕೇಳುತ್ತೇನೆ. ಜನರು ನನಗೆ ದೇವರಿದ್ದಂತೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಘಟನೆ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಮೂತ್ರ ವಿಸರ್ಜನೆ ಮಾಡಿದ ಆರೋಪಿಯನ್ನು ನಿನ್ನೆ ಬಂಧಿಸಲಾಗಿದೆ.
ಸ್ಥಳೀಯ ಅಧಿಕಾರಿಗಳು ಆರೋಪಿಯ ತಂದೆಗೆ ಸೇರಿದ ಮನೆಯ ಅಕ್ರಮ ಭಾಗವನ್ನು ನೆಲಸಮಗೊಳಿಸಿದ್ದಾರೆ. ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಬಿಜೆಪಿ ಶಾಸಕರ ಸಹಾಯಕ ಎಂದು ಕಾಂಗ್ರೆಸ್ ಹೇಳಿದ ನಂತರ ಪ್ರವೇಶ್ ಶುಕ್ಲಾ ನನ್ನು ಬಂಧಿಸಲಾಯಿತು. ಈತ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.