ದೇವೇಂದ್ರ ಫಡ್ನವೀಸ್ 
ದೇಶ

ಮಹಾರಾಷ್ಟ್ರ: ಬಿಜೆಪಿ ಮಾಜಿ ಸಂಸದ ಕಿರಿಟ್‌ ಸೋಮಯ್ಯ ಅಶ್ಲೀಲ ವಿಡಿಯೋ ತನಿಖೆಗೆ ಫಡ್ನವೀಸ್ ಆದೇಶ

ಬಿಜೆಪಿ ಮುಖಂಡ ಕಿರಿಟ್‌ ಸೋಮಯ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಡ್‌ ತನಿಖೆಗೆ ಆದೇಶಿಸಿದ್ದಾರೆ.

ಮುಂಬೈ:  ಬಿಜೆಪಿ ಮುಖಂಡ ಕಿರಿಟ್‌ ಸೋಮಯ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಡ್‌ ತನಿಖೆಗೆ ಆದೇಶಿಸಿದ್ದಾರೆ.

ವಿಡಿಯೋ ಪ್ರಸಾರವಾದ ಬೆನ್ನಲ್ಲೇ ‘ಆಡಳಿತ ಮೈತ್ರಿಕೂಟದ ನಿಜವಾದ ಮುಖ ಈಗ ಹೊರಬಂದಿದೆ’ ಎಂದು ವಿಪಕ್ಷಗಳು ಟೀಕಿಸಿವೆ. ಆದರೆ ಈ ವಿಡಿಯೋ ನಕಲಿಯಾಗಿದ್ದು, ನಾನು ಯಾವ ಮಹಿಳೆಗೂ ಕಿರುಕುಳ ನೀಡಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಿರಿಟ್ ಸೋಮಯ್ಯ ಒತ್ತಾಯಿಸಿದ್ದಾರೆ.

ವಿಡಿಯೋವನ್ನು ಮೊದಲು ಮರಾಠಿ ನ್ಯೂಸ್‌ ಚಾನಲ್‌ ಲೋಕಶಾಹಿ ಪ್ರಸಾರ ಮಾಡಿದ್ದು, ಬಳಿಕ ಇದು ವೈರಲ್‌ ಆಗಿದೆ. 8 ತಾಸಿನ ವಿಡಿಯೋ ಬಹಿರಂಗವಾಗಿದ್ದು, ಮಹಿಳೆ ಜತೆ ಸೋಮಯ್ಯ ರಾಸಲೀಲೆ ನಡೆಸಿದ ದೃಶ್ಯಗಳಿವೆ ಎನ್ನಲಾಗಿದೆ. ಆದರೆ ವಿಡಿಯೋದಲ್ಲಿನ ಮಹಿಳೆ ಈವರೆಗೂ ದೂರು ನೀಡಿಲ್ಲ. ‘ಹೀಗಾಗಿ ಮಹಿಳೆಯು ಕಾನೂನು ಮೇಲೆ ನಂಬಿಕೆ ಇರಿಸಿ ದೂರು ನೀಡಬೇಕು’ ಎಂದು ಮಹಾರಾಷ್ಟ್ರ ವಿಧಾನಪರಿಷತ್ ಉಪಸಭಾಪತಿ ನೀಲಂ ಗೋರೆ ಆಗ್ರಹಿಸಿದ್ದಾರೆ. ಇದರ ನಡುವೆ ಫಡ್ನವೀಸ್‌ ತನಿಖೆಗೆ ಆದೇಶಿಸಿದ್ದು, ‘ವಿಡಿಯೋದಲ್ಲಿನ ಮಹಿಳೆ ಪತ್ತೆ ಮಾಡಲಾಗುವುದು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು’ ಎಂದಿದ್ದಾರೆ.

ಆದರೆ ವಿಪಕ್ಷಗಳು, ‘ಆಡಳಿತ ಮೈತ್ರಿಕೂಟದ ಸ್ವಭಾವ ಮತ್ತು ನಿಜವಾದ ಮುಖ ಈಗ ಬಹಿರಂಗಗೊಂಡಿದೆ. ಕಿರಿಟ್‌ ಸೋಮಯ್ಯ ಹಲವು ಶಾಸಕರು ಮತ್ತು ಸಂಸದರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದಾರೆ. ಇದೀಗ ಸಾಕಷ್ಟು ಮಹಿಳೆಯರನ್ನು ಇ.ಡಿ. ತನಿಖೆ ಹೆಸರಿನಲ್ಲಿ ಬ್ಲಾಕ್‌ಮೇಲ್‌ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಈಗ ಅವರು ಕಿರಿಟ್‌ ಸೋಮಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಶಾಸಕಿ ಯಶೋಮತಿ ಠಾಕೂರ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಪ್ರತಿಭಟನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ: ಸಚಿವ ಹೆಚ್.ಸಿ. ಬಾಲಕೃಷ್ಣ ಪೊಲೀಸರನ್ನು ಛೂಬಿಟ್ರಾ? ಜೆಡಿಎಸ್ ಆರೋಪ Video

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ

ಶಿಕ್ಷಕರಿಗೆ SIR ಡ್ಯೂಟಿಯಿಂದ ಪರೀಕ್ಷಾ ಫಲಿತಾಂಶಗಳ ಮೇಲೆ ಪರಿಣಾಮ: ಮಧು ಬಂಗಾರಪ್ಪ ಆತಂಕ