ಸೂರ್ಯ 
ದೇಶ

ನಟ ಸೂರ್ಯ ಹುಟ್ಟುಹಬ್ಬ: ಬ್ಯಾನರ್ ಹಾಕುವಾಗ ವಿದ್ಯುತ್ ಹರಿದು ಇಬ್ಬರು ಯುವಕರ ಸಾವು

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಆಂಧ್ರಪ್ರದೇಶ: ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಟಾಲಿವುಡ್​ ಖ್ಯಾತ​ ನಟ ಸೂರ್ಯ ಅವರ ಹುಟ್ಟುಹಬ್ಬವಿತ್ತು. ಅದರಂತೆ ಅಭಿಮಾನಿಗಳಿಬ್ಬರು ಸೂರ್ಯನ ಹುಟ್ಟುಹಬ್ಬದ ಸಲುವಾಗಿ ಬ್ಯಾನರ್​ ಅಳವಡಿಸುವಾಗ ಕರೆಂಟ್​ ಶಾಕ್​ ಹೊಡೆದು ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮೋಪುಲವಾರಿಪಾಲೆಂಬ ಗ್ರಾಮದ ನರಸರಾವ್​ಪೇಟೆ ಮಂಡಲದ ನಕ್ಕಾ ವೆಂಕಟೇಶ್​ ಮತ್ತು ಪೋಲೂರಿ ಸಾಯಿ ಎಂಬವರು ವಿದ್ಯುತ್​ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ ನಟ ಸೂರ್ಯ ಬರ್ತ್​ಡೇ ಅಂಗವಾಗಿ ಬ್ಯಾನರ್​​​ ಅಳವಡಿಸುವಾಗ ಕರೆಂಟ್​​ ಶಾಕ್​ ಹೊಡೆದಿದೆ. ಕಬ್ಬಿಣದ ರಾಡ್​​​​​ ತಂತಿಗೆ ತಗುಲಿದಾಗ ಶಾಕ್​​ ಹೊಡೆದಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ವೆಂಕಟೇಶ್ ಮತ್ತು ಸಾಯಿ ಇಬ್ಬರು ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಇಬ್ಬರ ಸಾವಿಗೆ ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಪೊಲೂರು ಸಾಯಿ ಸಹೋದರಿ ಅನನ್ಯಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

SCROLL FOR NEXT