ಸಾಕ್ಷಿ ಹತ್ಯೆ ಘಟನೆಯ ದೃಶ್ಯ (ಸಂಗ್ರಹ ಚಿತ್ರ) 
ದೇಶ

ಸಾಕ್ಷಿ ಹತ್ಯೆಯ ಭೀಕರತೆಯನ್ನು ತೆರೆದಿಟ್ಟ ಶವಪರೀಕ್ಷೆ ವರದಿ

ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪ್ರಾಪ್ತ ಬಾಲಕಿ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು, ಘಟನೆಯ ಭೀಕರತೆಯನ್ನು ತೆರೆದಿಟ್ಟಿದೆ.

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪ್ರಾಪ್ತ ಬಾಲಕಿ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು, ಘಟನೆಯ ಭೀಕರತೆಯನ್ನು ತೆರೆದಿಟ್ಟಿದೆ.

ಶಾಬಾದ್ ಡೈರಿ ಪ್ರದೇಶದಲ್ಲಿ ಮೇ.28 ರಂದು ಆರೋಪಿ ಸಾಹಿಲ್ ಎಂಬ ವ್ಯಕ್ತಿ ಸಾಕ್ಷಿ ಎಂಬ ಅಪ್ರಾಪ್ತ ಬಾಲಕಿಯ ಹೊಟ್ಟೆಗೆ 16 ಬಾರಿ ಇರಿದು ಹತ್ಯೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸಾಕ್ಷಿಯ ಒಳಾಂಗಗಳು ಹೊಟ್ಟೆ ಭಾಗದಿಂದ ಹೊರಬಂದು ಜೋತಾಡುತ್ತಿದ್ದವು ಎಂಬ ಅಂಶ ಬಹಿರಂಗವಾಗಿದೆ.

ಪೊಲೀಸರು ಆಸ್ಪತ್ರೆಯಿಂದ 16-17 ಪುಟಗಳಷ್ಟು ಚಾರ್ಜ್ ಶೀಟ್ ನ್ನು ಪಡೆದಿದ್ದು, ಇದರಲ್ಲಿ ಕೊಲೆಯ ಭೀಕರ ವಿವರಗಳನ್ನು ವಿವರಿಸಲಾಗಿದೆ. ಆರೋಪಿ ಸಾಹಿಲ್ ಆಕೆಗೆ ಹಲವು ಬಾರಿ ಇರಿದಿದ್ದಾನೆ ಮತ್ತು ನಂತರ ಆಕೆಯ ತಲೆಯನ್ನು ಕಲ್ಲು ಬಂಡೆಯಿಂದ ಜಜ್ಜಿದ್ದಾನೆ ಎಂದು ವರದಿ ಬಹಿರಂಗಪಡಿಸಿದೆ. 

ಸಂತ್ರಸ್ತೆಯ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದು ತಲೆ ಪ್ರದೇಶದಲ್ಲಿ ಕೆಲವು ಮೂಳೆಗಳಲ್ಲಿ ಬಿರುಕುಗಳು ಮತ್ತು ಗಾಯಗಳು ಕಂಡುಬಂದಿವೆ.

ದೇಹದಲ್ಲಿರುವ 16 ಇರಿತದ ಗಾಯಗಳ ಪೈಕಿ ಗರಿಷ್ಠ ಗಾಯಗಳು ಸೊಂಟದ ಪ್ರದೇಶದಲ್ಲಿದ್ದು,  ದೇಹದ ಹಲವು ಮೂಳೆಗಳು ಮುರಿದಿದ್ದು ಹತ್ಯೆಯ ಭೀಕರತೆಯನ್ನು ತೋರಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್