ದೇಶ

ಜಮ್ಮು-ಕಾಶ್ಮೀರ: ಚರಂಡಿಯಲ್ಲಿ ಹುದುಗಿಸಿದ್ದ ಐಇಡಿ ಸ್ಫೋಟಕ ವಶಕ್ಕೆ

Manjula VN

ಕುಪ್ವಾರ: ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಪ್ರಬಲವಾದ ಸುಧಾರಿತ ಸ್ಫೋಟಕ ಸಾಧನವನ್ನು( ಐಇಡಿ) ಗಡಿ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಹದ್ವಾರ-ನವೋಗಾಂವ್ ರಾಜ್ಯ ಹೆದ್ದಾರಿಯ ಭಾತ್ಪುರ ಗ್ರಾಮದ ಸಾಮಾನ್ಯ ಪ್ರದೇಶದ ಚರಂಡಿ ಬಳಿ ಐಇಡಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಪಂಜಾಬ್'ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆಗಳು ಪಾಕಿಸ್ತಾನದ ಡ್ರೋಣ್ ವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಗುಪ್ತಚರ ದಳ ನೀಡಿದ ಮಾಹಿತಿಯ ಆಧಾರದ ಮೇಲೆ ಅಮೃತಸರಲ್ಲಿ ಮುರಿದ ಸ್ಥಿತಿಯಲ್ಲಿದ್ದ ಪಾಕಿಸ್ತಾನದ ಡ್ರೋಣ್'ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT