ಕಾಕ್‌ಪಿಟ್‌ಗೆ ಮಹಿಳೆಯ ಆಹ್ವಾನ: ಇಬ್ಬರು ಪೈಲಟ್ ಗಳ ವಿರುದ್ಧ ಏರ್ ಇಂಡಿಯಾ ಶಿಸ್ತುಕ್ರಮ
ಏರ್ ಇಂಡಿಯಾ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಯಿಂದ ತನಿಖೆ ಎದುರಿಸಿದ ಒಂದು ತಿಂಗಳ ನಂತರ, ಮತ್ತೊಮ್ಮೆ ಕಳೆದ ವಾರ ದೆಹಲಿ-ಲೇಹ್ ವಿಮಾನದ ಕಾಕ್‌ಪಿಟ್‌ಗೆ ಮಹಿಳೆಯನ್ನು ಆಹ್ವಾನಿಸಿದ್ದಕ್ಕಾಗಿ ಏರ್‌ಲೈನ್ಸ್ ಈಗ ಇಬ್ಬರು ಪೈಲಟ್‌ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ.
ನವದೆಹಲಿ: ಏರ್ ಇಂಡಿಯಾ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಯಿಂದ ತನಿಖೆ ಎದುರಿಸಿದ ಒಂದು ತಿಂಗಳ ನಂತರ, ಮತ್ತೊಮ್ಮೆ ಕಳೆದ ವಾರ ದೆಹಲಿ-ಲೇಹ್ ವಿಮಾನದ ಕಾಕ್‌ಪಿಟ್‌ಗೆ ಮಹಿಳೆಯನ್ನು ಆಹ್ವಾನಿಸಿದ್ದಕ್ಕಾಗಿ ಏರ್‌ಲೈನ್ಸ್ ಈಗ ಇಬ್ಬರು ಪೈಲಟ್‌ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ.
ಎಐ-445 ವಿಮಾನದ ಕಾಕ್‌ಪಿಟ್‌ಗೆ ಅನಧಿಕೃತವಾಗಿ ಮಹಿಳಾ ಪ್ರಯಾಣಿಕರೊಬ್ಬರು ಪ್ರವೇಶಿಸಿದ ಬಗ್ಗೆ ಕ್ಯಾಬಿನ್ ಸಿಬ್ಬಂದಿಯಿಂದ ದೂರು ಬಂದ ಕೂಡಲೇ ಏರ್ ಇಂಡಿಯಾ ಸಂಸ್ಥೆ ಪೈಲಟ್ ಮತ್ತು ಸಹ-ಪೈಲಟ್ ವಿರುದ್ಧ ಕ್ರಮ ಕೈಗೊಂಡಿದೆ.
ಎಐ-445 ಪೈಲಟ್‌ನ ಮಹಿಳಾ ಸ್ನೇಹಿತೆಯೊಬ್ಬರು ನಿಯಮಗಳನ್ನು ಪಾಲಿಸದೆ ಕಾಕ್‌ಪಿಟ್‌ಗೆ ಪ್ರವೇಶಿಸಿದ್ದಾರೆ, ಇಬ್ಬರೂ ಪೈಲಟ್‌ಗಳಿಗೆ ವಿಚಾರಣೆ ಮುಗಿಯುವವರೆಗೆ ಕರ್ತವ್ಯಕ್ಕೆ ಹಾಜರಾಗದಂತೆ ಆದೇಶ ನೀಡಿದೆ ಎಂದು ಏರ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಡೈವರ್ಟ್; ಏರ್ ಇಂಡಿಯಾದಿಂದ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಹಣ ವಾಪಸ್
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ವಿಚಾರ ಗಮನಕ್ಕೆ ಬಂದಿದ್ದು, ಕಾರ್ಯವಿಧಾನದ ಅನುಸಾರ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
"ಕೂಲಂಕುಷ ತನಿಖೆಗಾಗಿ ಏರ್ ಇಂಡಿಯಾ ಸಮಿತಿಯನ್ನು ರಚಿಸಿದೆ" ಎಂದು ಅಧಿಕಾರಿಯೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಏರ್ ಇಂಡಿಯಾದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.