ಹಿಂದೂ ಧರ್ಮ ಸ್ವೀಕರಿಸಿ ಯುವತಿಯನ್ನು ವಿವಾಹವಾದ ಯುವಕ. 
ದೇಶ

ಮಧ್ಯ ಪ್ರದೇಶ: ಪ್ರೀತಿಸಿದವಳ ಕೈಹಿಡಿಯಲು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ!

ಪ್ರೀತಿಸಿದವಳ ಕೈಹಿಡಿಯುವ ಸಲುವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್​ಪುರ ಎಂಬಲ್ಲಿ ನಡೆದಿದೆ.

ನರಸಿಂಗ್‌ಪುರ: ಪ್ರೀತಿಸಿದವಳ ಕೈಹಿಡಿಯುವ ಸಲುವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್​ಪುರ ಎಂಬಲ್ಲಿ ನಡೆದಿದೆ.

ಮೂಲತಃ ನರಸಿಂಗ್​​ಪುರ ನಿವಾಸಿಯಾಗಿರುವ ಫಾಜಿಲ್​ ಖಾನ್ ತನ್ನ ಗೆಳತಿ ಸೋನಾಲಿ ಎಂಬಾಕೆಯನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದ. ಇದರಂತೆ ಪ್ರೀತಿದಾಕೆಯನ್ನು ವಿವಾಹವಾಗಲು ಬಯಸಿದ್ದ ಯುವಕ ಗುರುವಾರ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಈ ವೇಳೆ ತನ್ನ ಹೆಸರನ್ನು ಅಮನ್ ರೈ ಎಂದು ಬದಲಿಸಿಕೊಂಡಿದ್ದಾನೆ.

ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್​ ರೈ ವಿವಾಹವು ನೆರವೇರಿದ್ದು, ಮದುವೆಗೆ ಎರಡು ಮನೆಯವರು ಸಾಕ್ಷಿಯಾಗಿದ್ದಾರೆ.

ದಂಪತಿಗಳು ಇದೀಗ ವಿವಾಹ ನೋಂದಣಿಗೆ ಅರ್ಜಿಯನ್ನು ಕೂಡ ಸಲ್ಲಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅಮನ್​ ತಂದೆ ಮೊದಲು ಹಿಂದೂ ಆಗಿದ್ದರು ಎಂಬುದು. ಅಮನ್ ಅವರ ತಾಯಿ ಮುಸ್ಲಿಂ ಆಗಿದ್ದು, ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊಡೆದು ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದರು.

ಈ ಬಗ್ಗೆ ಮಾತನಾಡಿರುವ ಅಮನ್​, ನನ್ನ ತಂದೆ ನನ್ನ ತಾಯಿಗಾಗಿ ಧರ್ಮವನ್ನು ಬದಲಾಯಿಸಿದ್ದರು. ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್