ಟಿಸಿಎಸ್ 
ದೇಶ

ಕೆಲಸಕ್ಕಾಗಿ ಲಂಚ ಪಡೆದ ಪ್ರಕರಣ: ಟಿಸಿಎಸ್ 4 ಸಿಬ್ಬಂದಿಗಳು ವಜಾ

ಸರ್ಕಾರಿ ಅಧಿಕಾರಿಗಳು ಲಂಚ ಪಡೆದ ಪ್ರಕರಣಗಳು ಸಾಮಾನ್ಯ.. ಆದರೆ ಪ್ರಖ್ಯಾತ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ನಲ್ಲೂ ಲಂಚಾವತಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಮುಂಬೈ: ಸರ್ಕಾರಿ ಅಧಿಕಾರಿಗಳು ಲಂಚ ಪಡೆದ ಪ್ರಕರಣಗಳು ಸಾಮಾನ್ಯ.. ಆದರೆ ಪ್ರಖ್ಯಾತ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ನಲ್ಲೂ ಲಂಚಾವತಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಭಾರತದ ಅತೀದೊಡ್ಡ ಟೆಕ್​​ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಬಹುಕೋಟಿ ಭ್ರಷ್ಟಾಚಾರ ಹಗರಣ ಕೇಳಿಬಂದಿದ್ದು, ಟಿಸಿಎಸ್​​ನಲ್ಲಿ ಕೆಲಸಕ್ಕಾಗಿ ಅಲ್ಲಿನ ಹಿರಿಯ ಅಧಿಕಾರಿಗಳು ಲಂಚ ಪಡೆದ ಪ್ರಕರಣದ ಮೇರೆಗೆ 4 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಬರೋಬ್ಬರಿ 100 ಕೋಟಿ ಲಂಚ ಪಡೆದು ಉದ್ಯೋಗ ನೀಡಿದ ಹಗರಣ ಇದೀಗ ಬೆಳಕಿಗೆ  ಬಂದಿದ್ದು, ಕಳೆದ ಮೂರು ವರ್ಷಗಳಿಂದ ಸುಮಾರು 100 ಕೋಟಿಯಷ್ಟು ಲಂಚ ಪಡೆದು ಸಾವಿರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣ ಸಂಬಂಧ ನಾಲ್ವರು ಟಿಸಿಎಸ್ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 

ಮೂಲಗಳ ಪ್ರಕಾರ ನೇಮಕಾತಿಗೆ ದುಡ್ಡು ಪಡೆದಿದ್ದಲ್ಲದೆ ಅಸಮರ್ಥರಿಗೆ ಉದ್ಯೋಗ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಪನಿಯ ನೇಮಕಾತಿ ವಿಭಾಗದ ಚೀಫ್ ಎಕ್ಸೂಕೂಟೀವ್ ಆಫೀಸರ್, ಚೀಫ್ ಆಫರೇಟಿಂಗ್ ಆಫೀಸರ್, ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳನ್ನು ಟಿಸಿಎಸ್​​ನಿಂದ ವಜಾ ಮಾಡಲಾಗಿದೆ. 

ದೈತ್ಯ ಐಟಿ ಕಂಪನಿ ಟಿಸಿಎಸ್‌ ಒಟ್ಟು 6 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರ 614,795 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಕಂಪನಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕಂಪನಿ ಮುಂದಾಗಿದೆ. ಅಲ್ಲದೆ ಹಣ ನೀಡಿ ಕೆಲಸ ಪಡೆದ ನೌಕರರ ಮೇಲೂ ಸಂಸ್ಥೆ ಕ್ರಮಕ್ಕೆ ಮುಂದಾಗಿದ್ದು ಈ ಸಂಬಂಧ ಆಂತರಿಕ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ. 

ಸದ್ಯ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಆತಂಕ ಶುರುವಾಗಿದ್ದು, ಯಾವಾಗ ಬೇಕಾದರೂ ಕಿತ್ತಾಕಬಹುದು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ತುಮಕೂರು: ಮಾರ್ಕೋನಹಳ್ಳಿ ಡ್ಯಾಂನಲ್ಲಿ ದುರಂತ; ಒಂದೇ ಕುಟುಂಬದ 6 ಮಂದಿ ನೀರುಪಾಲು!

ಬಿಹಾರ ಚುನಾವಣೆ: ಮಹಾಘಟಬಂಧನ್‌ನಲ್ಲಿ ಬಿರುಕು; RJD ಆಫರ್ ತಿರಸ್ಕರಿಸಿದ CPI-ML

"ಋತುಮತಿಯರನ್ನೂ ಬಿಡದ ಕಾಮುಕ": ದೆಹಲಿ ಬಾಬಾ ಚೈತನ್ಯಾನಂದ ಸರಸ್ವತಿ ಕೃತ್ಯಕ್ಕೆ ಮಹಿಳಾ ಸಹಚರರಿಂದ ಸಾಥ್; "ಕಾರಣ ಹೇಳಬೇಡಿ" ಎಂದು ಬೈಗುಳ!

SCROLL FOR NEXT