ದೇಶ

ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​ ದಂಪತಿಗೆ ಹೆಣ್ಣು ಮಗು ಜನನ

Manjula VN

ಪಾಟ್ನಾ: ಬಿಹಾರ ರಾಜ್ಯದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಮೊದಲ ಮಗುವನ್ನು ಸೋಮವಾರ ಸ್ವಾಗತಿಸಿದ್ದಾರೆ.

ಈ ಕುರಿತು ತೇಜಸ್ವಿ ಯಾದವ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಮುದ್ದಾಗ ಮಗಳೊಂದಿಗೆ ಇರುವ ಪೋಟೋವನ್ನು ಹಂಚಿಕೊಂಡಿದ್ದಾರೆ.

ದೇವರು ನನಗೆ ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಯಾದವ್ ಬರೆದುಕೊಂಡಿದ್ದಾರೆಂದು ತೇಜಸ್ವಿ ಯಾದವ್ ಅವರು ಬರೆದುಕೊಂಡಿದ್ದಾರೆ.

ತೇಜಸ್ವಿ ಯಾದವ್ ಅವರು ಒಟ್ಟು 9 ಮಂದಿ ಒಡಹುಟ್ಟಿದವರನ್ನು ಹೊಂದಿದ್ದು, ಅವರಲ್ಲಿ ಕಿರಿಯ ಯಾದವ್ ಆಗಿದ್ದಾರೆ.

ತೇಜಸ್ವಿ ಯಾದವ್ ಅವರು ತಮ್ಮ ಬಹುಕಾಲದ ಗೆಳತಿ ರಾಚೆಲ್ ಗಾಡಿನ್ಹೋ (ಮದುವೆ ಬಳಿಕ ರಾಜಶ್ರೀ ಯಾದವ್ ಆಗಿದ್ದಾರೆ) ಅವರನ್ನು 2021ರ ಡಿಸೆಂಬರ್​ 9ರಂದು ಮದುವೆಯಾಗಿದ್ದರು.

ರಾಚೆಲ್ ಅವರು ಮೂಲತಃ ಹರಿಯಾಣದವರಾಗಿದ್ದು, ಬಾಲ್ಯದಿಂದಲೂ ದೆಹಲಿಯಲ್ಲಿಯೇ ವಾಸವಾಗಿದ್ದರು. ದೆಹಲಿಯ ಆರ್​ಕೆ ಪುರಂನಲ್ಲಿರುವ ಡಿಪಿಎಸ್ ಶಾಲೆಯಲ್ಲಿ ತೇಜಸ್ವಿ ಮತ್ತು ರಾಚೆಲ್ ಒಟ್ಟಿಗೇ ಓದಿದ್ದರು. ಆಗನಿಂದಲೂ ಸ್ನೇಹಿತರಾಗಿದ್ದ ಅವರು, ಬಳಿಕ ತಮ್ಮ ಸ್ನೇಹಕ್ಕೆ ಪ್ರೀತಿಯ ಮುದ್ರೆ ಒತ್ತಿದ್ದರು. ಸುಮಾರು 7 ವರ್ಷ ಪ್ರೀತಿಸಿ 2021ರಲ್ಲಿ ಮದುವೆಯಾಗಿದ್ದರು.

SCROLL FOR NEXT