ದೇಶ

ಮಮತಾ ಬ್ಯಾನರ್ಜಿ ದುರ್ಯೋಧನ, ದುಶ್ಶಾಸನ ಎಂದು ಕರೆದಿದ್ದು ಯಾರನ್ನ?

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದೆಡೆಗೆ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂದು ಪ್ರತಿಭಟನೆಗೆ ಮುಂದಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಗೆ ಮತ್ತೊಂದು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದಾರೆ. 

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ದೀದೀ ಈ ಪ್ರತಿಭಟನೆಗೆ ಕರೆ ನೀಡಿದ್ದು, ಬಿಜೆಪಿ ವಿರುದ್ಧ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಲು ಎಲ್ಲಾ ಪಕ್ಷದವರಿಗೂ ಕರೆ ನೀಡಿದ್ದಾರೆ. 

2024 ರ ಲೋಕಸಭೆ ಚುನಾವಣೆ ಬಿಜೆಪಿ ಹಾಗೂ ದೇಶದ ಜನತೆಯ ನಡುವಿನ ಚುನಾವಣೆಯಾಗಿದ್ದು, ಎಲ್ಲಾ ಧರ್ಮದವರೂ ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಬೇಕು ಈ ಮೂಲಕ ದೇಶವನ್ನು ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ. 

ಇದೇ ವೇಳೆ ಬಿಜೆಪಿಯನ್ನು ದುಶ್ಶಾಸನ ಹಾಗೂ ದುರ್ಯೋಧನನಿಗೆ ಮಮತಾ ಬ್ಯಾನರ್ಜಿ ಹೋಲಿಕೆ ಮಾಡಿದ್ದಾರೆ. 

"ಈ ದುಶ್ಶಾಸನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಒಗ್ಗೂಡಬೇಕೆಂದು ಪ್ರತಿ ರಾಜಕೀಯ ಪಕ್ಷಕ್ಕೂ ಮನವಿ ಮಾಡುತ್ತೇನೆ, ದೇಶದ ಸಾಮಾನ್ಯ ನಾಗರಿಕ ಉಳಿಯಬೇಕಾದರೆ, ಭಾರತದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ದುರ್ಯೋಧನ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ. 
 

SCROLL FOR NEXT