ದೇಶ

ಪಿಎಫ್‌ಐ ಜತೆ ಲಿಂಕ್: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಬಜರಂಗದಳ ಪ್ರತಿಭಟನೆ

Lingaraj Badiger

ಭೋಪಾಲ್: ಬಜರಂಗದಳವನ್ನು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಗೆ ಹೋಲಿಸಿರುವ ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ವಿರೋಧಿಸಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬಜರಂಗದಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ವಿರೋಧಿಸಿ, ಬಜರಂಗದಳ ಸ್ಥಳೀಯ ಘಟಕದ ಮುಖ್ಯಸ್ಥ ಸುಮಿತ್ ಠಾಕೂರ್ ನೇತೃತ್ವದಲ್ಲಿ ಬಜರಂಗದಳದ ಕಾರ್ಯಕರ್ತರು ಜಬಲ್‌ಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ನುಗ್ಗಿ ಆಸ್ತಿ ಹಾನಿ ಮಾಡಿದೆ.

ಬಜರಂಗ ದಳದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ವಿದ್ಯುತ್ ವ್ಯವಸ್ಥೆ ಸೇರಿದಂತೆ ಆಸ್ತಿ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಇನ್ನು ಕಾಂಗ್ರೆಸ್ ಆಡಳಿತವಿರುವ ನೆರೆಯ ಛತ್ತೀಸ್‌ಗಢದಲ್ಲಿ ಸಿಎಂ ಭೂಪೇಶ್ ಬಘೇಲ್ ಅವರು ಬಜರಂಗದಳಕ್ಕೆ ಅಶಿಸ್ತಿನಿಂದ ವರ್ತಿಸಬೇಡಿ ಮತ್ತು ಹಿಂಸಾಚಾರದಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ. 

ಬಜರಂಗದಳದ ಕಾರ್ಯಕರ್ತರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಜರಂಗ ಬಲಿ ಹೆಸರಿನಲ್ಲಿ ಹಿಂಸೆಯನ್ನು ಒಪ್ಪಲಾಗದು. ಅಗತ್ಯವಿದ್ದರೆ, ನಾವು ಆ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದು ಬಘೇಲ್ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT