ದಿ ಕೇರಳ ಸ್ಟೋರಿ ಸ್ಟಿಲ್ 
ದೇಶ

'ದಿ ಕೇರಳ ಸ್ಟೋರಿಗೆ' ಮಧ್ಯಪ್ರದೇಶ, ಯುಪಿ ನಂತರ ಉತ್ತರಾಖಂಡ್ ರಾಜ್ಯದಲ್ಲಿಯೂ ತೆರಿಗೆ ವಿನಾಯಿತಿ!

ವಿವಾದಾತ್ಮಕ ' ದಿ ಕೇರಳ ಸ್ಟೋರಿ'ಗೆ ಉತ್ತರಾಖಂಡ್ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಇರಲಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಪ್ತಲ್ ಮಹಾರಾಜ್ ಹೇಳಿದ್ದಾರೆ. ಅದಾ ಶರ್ಮಾ ನಟಿಸಿರುವ ಈ ಚಿತ್ರವು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 

ಡೆಹ್ರಾಡೂನ್: ವಿವಾದಾತ್ಮಕ ' ದಿ ಕೇರಳ ಸ್ಟೋರಿ'ಗೆ ಉತ್ತರಾಖಂಡ್ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಇರಲಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಪ್ತಲ್ ಮಹಾರಾಜ್ ಹೇಳಿದ್ದಾರೆ. ಅದಾ ಶರ್ಮಾ ನಟಿಸಿರುವ ಈ ಚಿತ್ರವು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 

ಕೇರಳದಿಂದ ಕಣ್ಮರೆಯಾದ ಸಾವಿರಾರು ಮಹಿಳೆಯ ಹಿಂದಿನ ಘಟನೆಗಳನ್ನು ಈ ಚಿತ್ರ ಹೇಳುತ್ತದೆ. ಬಲವಂತದಿಂದ ಹೇಗೆ ಇಸ್ಲಾಂಗೆ ಮಹಿಳೆಯನ್ನು ಮತಾಂತರಿಸಲಾಯಿತು ಮತ್ತು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ ಗೆ ಹೇಗೆ ಸೇರಿದರು ಎಂಬುದರ ಸುತ್ತ ಕಥೆ ಸಾಗುತ್ತದೆ. 

ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಬಗ್ಗೆ ಉತ್ತರಾಖಂಡ ಸರ್ಕಾರ ಇನ್ನೂ ಔಪಚಾರಿಕ ಪ್ರಕಟಣೆ ಮಾಡಿಲ್ಲವಾದರೂ ಶೀಘ್ರದಲ್ಲೇ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಸಿಗಲಿದೆ ಎಂದು ಮಹಾರಾಜ್ ತಿಳಿಸಿದರು.  ಕೇರಳದ ಸತ್ಯ ಕಥೆ ಬಿಂಬಿಸುವ ಈ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು  ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಹೇಳಿದ್ದರು. 

ಪಶ್ಚಿಮ ಬಂಗಾಳ ಸರ್ಕಾರ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳು ಭಾನುವಾರದಿಂದ ಪ್ರದರ್ಶನಗಳನ್ನು ರದ್ದುಗೊಳಿಸಿವೆ. ಆದರೆ, ಬಿಜೆಪಿ ಈ ಸಿನಿಮಾವನ್ನು ಬೆಂಬಲಿಸಿದೆ ಅಲ್ಲದೇ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಲು ಅನುಮತಿಸಿವೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel