ದೇಶ

ಸ್ಟಾಲಿನ್ ಸಂಪುಟ ಪುನರ್ರಚನೆ: ಪಿಟಿಆರ್ ಗೆ ಐಟಿ, ತಂಗಂ ತೆನ್ನರಸು ನೂತನ ಹಣಕಾಸು ಸಚಿವ

Lingaraj Badiger

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಗುರುವಾರ ತಮ್ಮ ಸಂಪುಟವನ್ನು ಪುನಾ ರಚನೆ ಮಾಡಿದ್ದು, ಸಚಿವ ಪಳನಿವೇಲ್ ತ್ಯಾಗ ರಾಜನ್(ಪಿಟಿಆರ್) ಅವರ ಬಳಿ ಇದ್ದ ಹಣಕಾಸು ಖಾತೆಯನ್ನು ಹಿಂಪಡೆದು, ತಂಗಂ ತೆನ್ನರಸು ಅವರನ್ನು ಹೊಸ ಹಣಕಾಸು ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಪಿಟಿಆರ್ ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆ ಹಂಚಿಕೆ ಮಾಡಿದ್ದಾರೆ.

ನಿರೀಕ್ಷೆಯಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಟಿಆರ್ ಬಿ ರಾಜಾ ಅವರಿಗೆ ಕೈಗಾರಿಕೆ ಖಾತೆ ನೀಡಲಾಗಿದೆ. ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವರಾಗಿದ್ದ ಎಸ್‌ಎಂ ನಾಸರ್ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಅವರ ಖಾತೆಯನ್ನು ಟಿ ಮನೋ ತಂಗರಾಜ್ ಅವರಿಗೆ ನೀಡಲಾಗಿದೆ.

ಇದನ್ನು ಓದಿ: ತಿಹಾರ್ ಜೈಲಿನಲ್ಲೇ ಭೂಗತ ಪಾತಕಿ ಟಿಲ್ಲು ಕಗ್ಗೊಲೆ: ಮೂಕ ಪ್ರೇಕ್ಷಕರಾಗಿದ್ದ 7 ತಮಿಳುನಾಡು ಪೊಲೀಸರ ಅಮಾನತು
 
ವಾರ್ತಾ ಸಚಿವ ಎಂಪಿ ಸಾಮಿನಾಥನ್ ಅವರಿಗೆ ತಮಿಳು ಅಭಿವೃದ್ಧಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ತಂಗಂ ತೆನ್ನರಸು ಅವರು ಅವರಿಗೆ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಖಾತೆ ಜೊತೆಗೆ ಯೋಜನೆ, ಪಿಂಚಣಿ, ಪಿಂಚಣಿ ಪ್ರಯೋಜನಗಳು, ಅಂಕಿಅಂಶಗಳು ಮತ್ತು ಪುರಾತತ್ತ್ವ ಶಾಸ್ತ್ರ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.

SCROLL FOR NEXT