ಉಮೇಶ್ ಪಾಲ್ ಪತ್ನಿ ಶೈಸ್ತಾ ಪರ್ವೀನ್ 
ದೇಶ

ಉಮೇಶ್ ಪಾಲ್ ಹತ್ಯೆ: ಶೈಸ್ತಾ ಪರ್ವೀನ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅವರ ಆಪ್ತ ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಸಬೀರ್ ವಿರುದ್ಧ ಪ್ರಯಾಗರಾಜ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಖನೌ: ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅವರ ಆಪ್ತ ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಸಬೀರ್ ವಿರುದ್ಧ ಪ್ರಯಾಗರಾಜ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೈಸ್ತಾ ಪರ್ವೀನ್ ಪತ್ತೆಗಾಗಿ 50,000 ರೂಪಾಯಿ ಬಹುಮಾನವನ್ನು  ಉತ್ತರ ಪ್ರದೇಶ ಪೊಲೀಸರು ಈಗಾಗಲೇ  ಘೋಷಿಸಿದ್ದಾರೆ. ಪ್ರಯತ್ನಪಟ್ಟರೂ ಪರ್ವೀನ್ ಮತ್ತು ಇತರ ಇಬ್ಬರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ದೇಶದಿಂದ ಓಡಿಹೋಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ಮೂವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಪ್ರಯಾಗ್‌ರಾಜ್ ಪೊಲೀಸರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಇದರ ಆಧಾರದ ಮೇಲೆ ದೇಶ ತೊರೆಯದಂತೆ ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ನೋಟೀಸ್ ಅವಧಿಯು 1 ವರ್ಷ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೇ ರಾಜೀನಾಮೆ

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT