ದೇಶ

ಪಂಜಾಬ್: ಪಾಕ್ ಡ್ರೋನ್‌ನಿಂದ ಬಿದ್ದ 15 ಕೆಜಿಗೂ ಹೆಚ್ಚು ಡ್ರಗ್ಸ್ ವಶಪಡಿಸಿಕೊಂಡ ಬಿಎಸ್‌ಎಫ್

Ramyashree GN

ಜಲಂಧರ್: ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಹಾರುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ತಡೆದಿದ್ದು, 15 ಕೆಜಿಗೂ ಹೆಚ್ಚು ಶಂಕಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಪಾಕಿಸ್ತಾನದ ರೋಗ್ ಡ್ರೋನ್‌ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಮತ್ತು ಅಮೃತಸರದ ಕಕ್ಕರ್ ಗ್ರಾಮದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಗುಂಡು ಹಾರಿಸುವ ಮೂಲಕ ಅದನ್ನು ತಡೆದಿದ್ದಾರೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಡ್ರೋನ್ ಅನ್ನು ಹೊಡೆದುರುಳಿಸಿದ ಬಳಿಕ ಆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 15.5 ಕೆಜಿ ತೂಕದ ಶಂಕಿತ ಹೆರಾಯಿನ್ ಹೊಂದಿರುವ ಎರಡು ದೊಡ್ಡ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪಾಕಿಸ್ತಾನದೊಂದಿಗೆ 500 ಕಿಮೀ ಉದ್ದದ ಗಡಿಯನ್ನು ಪಂಜಾಬ್ ಹಂಚಿಕೊಂಡಿದೆ. ಬಿಎಸ್ಎಫ್ ಇಲ್ಲಿ ಕಾವಲು ಕಾಯುತ್ತದೆ. ಆದರೆ, ಕಳೆದ ಮೂರು-ನಾಲ್ಕು ವರ್ಷಗಳಿಂದ ಡ್ರೋನ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ನೆರೆಯ ದೇಶದಿಂದ ಭಾರತಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಹಾರಾಟ ನಡೆಸುತ್ತಿರುವುದು ಭದ್ರತಾ ಪಡೆಗಳಿಗೆ ಆತಂಕದ ವಿಷಯವಾಗಿದೆ.

SCROLL FOR NEXT