ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಂತರಾಷ್ಟ್ರೀಯ ಗಡಿಯ ಬಳಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಪಂಜಾಬ್‌ನ ಅಮೃತಸರ ಬಳಿಯ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ.

ಬಿಎಸ್ಎಫ್ ಹೊಡೆದುರುಳಿಸಿದ ಪಾಕಿಸ್ತಾನದ ಡ್ರೋನ್
Ramyashree GN
Updated On : 21 May 2023, 8:47 am

ನವದೆಹಲಿ: ಪಂಜಾಬ್‌ನ ಅಮೃತಸರ ಬಳಿಯ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ.

ಶನಿವಾರ ರಾತ್ರಿ 8.48 ರ ಸುಮಾರಿಗೆ ಅಮೃತಸರ ಜಿಲ್ಲೆಯ ಧನೋ ಕಲಾನ್ ಗ್ರಾಮದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ನ ಝೇಂಕರಿಸುವ ಶಬ್ದವನ್ನು ಆ ಪ್ರದೇಶದಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಪಡೆಗಳು ಕೇಳಿದವು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಎಸ್‌ಎಫ್ ಪಡೆಗಳು ಡ್ರೋನ್ ಗಡಿ ಪ್ರವೇಶಿಸುವುದನ್ನು ತಡೆಯಲು ತಕ್ಷಣವೇ ಪ್ರತಿಕ್ರಿಯಿಸಿದವು ಮತ್ತು ನಿಷಿದ್ಧ ವಸ್ತುಗಳೊಂದಿಗೆ ಬರುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಯಶಸ್ವಿಯಾಗಿ ನೆಲಸಮಗೊಳಿಸಿದವು ಎಂದು ಅದು ಹೇಳಿದೆ.

Advertisement

Advertisement

ಈ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ, ಬಿಎಸ್ಎಫ್ ತಂಡ ಶಂಕಿತ ಮಾದಕವಸ್ತುಗಳ ಮೂರು ಪ್ಯಾಕೆಟ್‌ಗಳನ್ನು ಒಳಗೊಂಡಿರುವ ಒಂದು 'ಡ್ರೋನ್ (ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್, 300 ಆರ್‌ಟಿಕೆ) ಜೊತೆಗೆ ವಶಪಡಿಸಿಕೊಂಡಿವೆ.

'ಶಂಕಿತ ಹೆರಾಯಿನ್‌ನ ಒಟ್ಟು ತೂಕವು ಸರಿಸುಮಾರು 3.3 ಕೆಜಿಯಷ್ಟಿದೆ. ಜಾಗರೂಕ ಬಿಎಸ್‌ಎಫ್ ಪಡೆಗಳಿಂದ ಪಾಕಿಸ್ತಾನದ ಮತ್ತೊಂದು ನೀಚ ಪ್ರಯತ್ನ ವಿಫಲವಾಗಿದೆ' ಬಿಎಸ್ಎಫ್ ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments