ಕಪಿಲ್ ಸಿಬಲ್ 
ದೇಶ

ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಇರುವ ಭಾರತ ಬೇಕು: ಕಪಿಲ್ ಸಿಬಲ್

ನೂತನ ಸಂಸತ್ ಭವನ ಉದ್ಘಾಟನೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಹೊಸ ಅಥವಾ ಹಳೆಯ ಭಾರತವಲ್ಲ, ತಮಗೆ ಬೇಕಿರುವುದು ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಹೊಂದಿರುವ ಭಾರತ ಎಂದು ಹೇಳಿದ್ದಾರೆ. 

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಹೊಸ ಅಥವಾ ಹಳೆಯ ಭಾರತವಲ್ಲ, ತಮಗೆ ಬೇಕಿರುವುದು ಧಾರ್ಮಿಕ ಆಚರಣೆಗಳಿಲ್ಲದ ಸಂಸತ್ ಹೊಂದಿರುವ ಭಾರತ ಎಂದು ಹೇಳಿದ್ದಾರೆ. 

ಕಾನೂನು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ನಾಗರಿಕರನ್ನು ಕೊಲ್ಲುವುದಿಲ್ಲ ಎಂದು ಸಿಬಲ್ ಹೇಳಿದ್ದಾರೆ. ಹೊಸ ಸಂಸತ್ ಭವನದ ಉದ್ಘಾಟನೆ ದೇಶದ ಅಭಿವೃದ್ಧಿ ಪಯಣದಲ್ಲಿ ‘ಅಮರ’ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಕಾರ್ಯಕ್ರಮವನ್ನು ಬಣ್ಣಿಸಿದ್ದರು. 

ಈ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, 5.-6 ಅಂಶಗಳನ್ನು ಪ್ರಸ್ತಾಪಿಸಿದ್ದು, ತಮಗೆ ಬೇಕಿರುವ ಭಾರತವನ್ನು ಪಟ್ಟಿ ಮಾಡಿದ್ದಾರೆ. 1. "ತಮಗೆ ಬೇಕಿರುವುದು ಹೊಸ ಅಥವಾ ಹಳೆಯ ಭಾರತವಲ್ಲ, 2. ಧಾರ್ಮಿಕ ಪ್ರಕ್ರಿಯೆಗಳ ಹೊರತಾದ ಸಂಸತ್ ಇರುವ ಭಾರತ ಬೇಕು 3. ಎಲ್ಲರನ್ನೂ ಸಮಾನವಾಗಿ ನೋಡುವ ಕಾನೂನು ಇರಬೇಕು, 4. ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಹತ್ಯೆ ನಡೆಯದಂತಹ ಭಾರತ ಬೇಕು, 5. ಯಾವುದೇ ಯುವತಿ/ಯುವಕ ಪ್ರೀತಿಸಿ ವಿವಾಹವಾದರೆ ಬಜರಂಗದಳದ ಭಯ ರಹಿತವಾಗಿರುವ ಭಾರತ ಬೇಕು. 6. ಮಾಧ್ಯಮಗಳು ತಟಸ್ಥವಾಗಿರಬೇಕು. ಎಂದು ಸಿಬಲ್ ಹೇಳಿದ್ದಾರೆ.

1.4 ಶತಕೋಟಿ ಮನಸ್ಸುಗಳ ಮಹತ್ವಾಕಾಂಕ್ಷೆಯ ತಳಹದಿಯನ್ನು ಹೊಂದಿರುವ ಚಿಂತನೆಯ ಸ್ವಾತಂತ್ರ್ಯ ಭಾರತವನ್ನು ಹೊಸತನ್ನಾಗಿ ಮಾಡುತ್ತದೆಯೇ ಹೊರತು. ಇಟ್ಟಿಗೆ ಮತ್ತು ಗಾರೆಗಳಲ್ಲ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT