ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ರಾಹುಲ್ ಗಾಂಧಿ 
ದೇಶ

ಪ್ರಧಾನಿ ಮೋದಿಯವರು ಬ್ರಹ್ಮಾಂಡ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ದೇವರಿಗೇ ವಿವರಿಸಬಲ್ಲರು: ರಾಹುಲ್ ವ್ಯಂಗ್ಯ

ವಿದೇಶಗಳಲ್ಲಿ ಉಪನ್ಯಾಸ, ಭಾಷಣ ಮಾಡಲು ಹೋದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದರ್ಭ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿಯವರನ್ನು ಮತ್ತು ಕೇಂದ್ರ ಬಿಜೆಪಿ ನಾಯಕರು ಅನೇಕ ಬಾರಿ ಟೀಕಿಸಿದ್ದುಂಟು. ಈ ಬಾರಿಯೂ ಅದೇ ರೀತಿ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಗಿ ಟೀಕಿಸಿ ಸುದ್ದಿಯಾಗಿದ್ದಾರೆ. 

ಸ್ಯಾನ್ ಫ್ಲಾನ್ಸಿಸ್ಕೊ (ಯುಎಸ್): ವಿದೇಶಗಳಲ್ಲಿ ಉಪನ್ಯಾಸ, ಭಾಷಣ ಮಾಡಲು ಹೋದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದರ್ಭ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿಯವರನ್ನು ಮತ್ತು ಕೇಂದ್ರ ಬಿಜೆಪಿ ನಾಯಕರು ಅನೇಕ ಬಾರಿ ಟೀಕಿಸಿದ್ದುಂಟು. ಈ ಬಾರಿಯೂ ಅದೇ ರೀತಿ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಗಿ ಟೀಕಿಸಿ ಸುದ್ದಿಯಾಗಿದ್ದಾರೆ. 

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೇಶದಲ್ಲಿ ಎಲ್ಲಾ ವಿಷಯಗಳನ್ನು ರಾಜಕೀಯವಾಗಿ ನಿಯಂತ್ರಿಸಲಾಗುತ್ತಿತ್ತು. ಅದಕ್ಕೆ ಭಾರತ್ ಜೋಡೋ ಯಾತ್ರೆಯನ್ನು ತಾನು ಅನಿವಾರ್ಯವಾಗಿ ಮಾಡಬೇಕಾಯಿತು. ಇಡೀ ಭಾರತ ತಮ್ಮ ಈ ಮೆಗಾ ಪಾದಯಾತ್ರೆಯಲ್ಲಿ ಜೋಡಿಯಾಗಿ ನಿಂತಿತ್ತು ಎಂದಿದ್ದಾರೆ.

10 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಅವರು, ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸಾಂತಾ ಕ್ಲಾರಾದಲ್ಲಿ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಯುಎಸ್‌ಎ ಆಯೋಜಿಸಿದ್ದ 'ಮೊಹಬ್ಬತ್ ಕಿ ದುಕಾನ್' ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ತಿಂಗಳ ಹಿಂದೆ ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆ ಮಾಡುತ್ತಾ ಜನರೊಂದಿಗೆ ಬೆರೆಯುತ್ತಾ ಹೋಗುತ್ತಿದ್ದಾಗ ಜನಸಾಮಾನ್ಯರನ್ನು ಮಾತನಾಡಿಸಿದಾಗ ಅವರ ಕಷ್ಟಗಳು ಅರ್ಥವಾಗತೊಡಗಿದವು. ನಮ್ಮಲ್ಲಿ ರಾಜಕೀಯ ಮಾಡುತ್ತಿರುವ ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅರಿತುಕೊಂಡಿದ್ದೇವೆ. ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಿಸುತ್ತಿವೆ. ಜನರಿಗೆ ಬೆದರಿಕೆ ಹಾಕಲಾಗುತ್ತದೆ. ವಿರುದ್ಧ ತನಿಖಾ ಏಜೆನ್ಸಿಗಳನ್ನು ಬಳಸಲಾಗುತ್ತದೆ. ಜನರನ್ನು ಸಂಪರ್ಕಿಸಲು ಅವರ ಕಷ್ಟ ಸುಖ ತಿಳಿಯಲು ನಾವು ಭಾರತದ ದಕ್ಷಿಣದ ತುದಿಯಿಂದ ಶ್ರೀನಗರದವರೆಗೆ ಪಾದಯಾತ್ರೆ ನಡೆಸಿದೆವು ಎಂದರು. 

ಮೋದಿ ವಿರುದ್ಧ ವ್ಯಂಗ್ಯ: ಪ್ರಧಾನಿ ಮೋದಿಯವರ ವಿರುದ್ಧ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಭಾರತದಲ್ಲಿನ ಕೆಲವು ಗುಂಪುಗಳು ತಮಗೆ ಎಲ್ಲವೂ ಗೊತ್ತು ಎಂಬ ಭಾವನೆಯಲ್ಲಿರುವ ರೋಗವನ್ನು ಹೊಂದಿವೆ ಎಂದು ಹೇಳಿದರು.

"ಭಾರತದಲ್ಲಿ, ನಾವು ವಿವಿಧ ಭಾಷೆಗಳು, ವಿವಿಧ ಧರ್ಮಗಳ ಜನರೊಂದಿಗೆ ಬೆಳೆದಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ಮೇಲೆ ದಾಳಿ ಮಾಡಲಾಗುತ್ತಿದೆ. ಭಾರತದಲ್ಲಿ ಗಾಂಧೀಜಿ ಮತ್ತು ಗುರುನಾನಕ್ ಜಿ ಅವರಂತಹ ಮನೋಭಾವ ಹೇಗೆ ಎಂದರೆ ನೀವು ಎಲ್ಲವನ್ನೂ ತಿಳಿದಿದ್ದೀರಿ, ನಿಮಗೆ ಎಲ್ಲವೂ ಗೊತ್ತು ಎಂದು ಭಾವಿಸಬಾರದು ಎಂಬುದಿದೆ. ಆದರೆ ಭಾರತದ ಕೆಲವು ಗುಂಪುಗಳು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುವುದು ಒಂದು 'ರೋಗವಾಗಿದೆ.

ತಮಗೆ ದೇವರೊಂದಿಗೆ ಸಂಭಾಷಣೆ ನಡೆಸಲು ಅವಕಾಶ ಸಿಕ್ಕಿದರೆ ದೇವರಿಗೆ ಸಹ ಎಲ್ಲವನ್ನೂ ಅವರು ವಿವರಿಸಬಹುದು ಎಂದು ಮೋದಿಯವರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಭಾರತದಲ್ಲಿ ದೇವರಿಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸುವ ಜನರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಂತಹ ವ್ಯಕ್ತಿಗಳಲ್ಲೊಬ್ಬರು. ಈ ಜನರು ತಮಗೆ ಎಲ್ಲವನ್ನೂ ತಿಳಿದಿದೆ, ಇತಿಹಾಸ, ವಿಜ್ಞಾನ ಎಲ್ಲ ಗೊತ್ತು ಎಂದು ಭಾವಿಸಿದ್ದಾರೆ. ವಿಜ್ಞಾನವನ್ನು ವಿಜ್ಞಾನಿಗಳಿಗೆ ಮತ್ತು ಸೈನಿಕರಿಗೆ ಯುದ್ಧಗಳ ಬಗ್ಗೆ ಬೇಕಾದರೆ ವಿವರಿಸುತ್ತಾರೆ. ಜಗತ್ತು ತುಂಬಾ ದೊಡ್ಡದಾಗಿದೆ. ಯಾವುದೇ ವ್ಯಕ್ತಿಗೆ ಎಲ್ಲವನ್ನೂ ತಿಳಿದುಕೊಳ್ಳಲು ಜಟಿಲವಾಗಿದೆ.

ನೀವು ಮೋದಿಯವರನ್ನು ದೇವರೊಂದಿಗೆ ಕೂರಿಸಿದರೆ, ಅವರು ದೇವರಿಗೆ ವಿವರಿಸುತ್ತಾರೆ, ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾರೆ, ದೇವರೇ ಅವರ ಮಾತಿಗೆ ಗೊಂದಲಕ್ಕೊಳಗಾಗಬಹುದು. ರಾಹುಲ್ ಗಾಂಧಿಯ ಮಾತಿಗೆ ಅಲ್ಲಿ ಸೇರಿದ್ದ ನೂರಾರು ಅನಿವಾಸಿ ಭಾರತೀಯ ನಾಗರಿಕರು ನಕ್ಕರು. 

ರಾಹುಲ್ ಮಾತಲ್ಲಿ ಕರ್ನಾಟಕ ಚುನಾವಣೆ ಫಲಿತಾಂಶ: ನೆಂತರ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಪ್ರಸ್ತಾಪಿಸಿದರು. ರಾಜಕೀಯ ಉದ್ಯಮಿಯಾಗಿ ನಾನು ಬಿಜೆಪಿಯಲ್ಲಿನ ಹುಳುಕುಗಳನ್ನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಹೇಳಿದರು.

ಇತ್ತೀಚಿನ ಕರ್ನಾಟಕ ಚುನಾವಣೆಯನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹೋರಾಡಿ ಬಿಜೆಪಿಯನ್ನು ಸೋಲಿಸಿತು. ಮೇಲ್ನೋಟಕ್ಕೆ ಸೋಲಿಸಿತು ಎಂದು ಹೇಳಿದರೂ ಕೂಡ ನಾವು ಬಳಸಿದ ಯಂತ್ರಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ಚುನಾವಣೆಯನ್ನು ಎದುರಿಸಲು ಸಂಪೂರ್ಣವಾಗಿ ವಿಭಿನ್ನವಾದ ವಿಧಾನವನ್ನು ಬಳಸಿತು, ಕರ್ನಾಟಕದಲ್ಲಿ ಏನಾಯಿತು ಎಂಬುದರ ಅಂಶಗಳು 'ಭಾರತ್ ಜೋಡೋ ಯಾತ್ರೆ'ಯಿಂದ ಹೊರಬಂದವು ಎಂದು ಹೇಳಿದರು.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕ್ರಮವಾಗಿ 66 ಮತ್ತು 19 ಸ್ಥಾನಗಳನ್ನು ಗಳಿಸಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT