ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಿಕಂದರಬಾದ್: ಪ್ರಧಾನಿ ಮೋದಿ ಭಾಷಣ ವೇಳೆ ಹೈಡ್ರಾಮ, ಲೈಟ್ ಟವರ್ ಏರಿದ ಯುವತಿ! ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೈಡ್ರಾಮವೊಂದು ನಡೆಯಿತು. ಪ್ರಧಾನಿ ಗಮನ ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದರು. ಇದು ನೆರೆದಿದ್ದ ಜನರಲ್ಲಿ ಒಂದು ಕ್ಷಣ ಭೀತಿಯನ್ನು ಸೃಷ್ಟಿಸಿತು.

ಲೈಟ್ ಟವರ್ ಏರಿದ ಯುವತಿ, ಪ್ರಧಾನಿ ಮೋದಿ ಚಿತ್ರ
Nagaraja AB
Updated On : 11 Nov 2023, 8:09 pm

ಸಿಕಂದರಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೈಡ್ರಾಮವೊಂದು ನಡೆಯಿತು. ಪ್ರಧಾನಿ ಗಮನ ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದರು. ಇದು ನೆರೆದಿದ್ದ ಜನರಲ್ಲಿ ಒಂದು ಕ್ಷಣ ಭೀತಿಯನ್ನು ಸೃಷ್ಟಿಸಿತು.

ಪ್ರಧಾನಿ ಜೊತೆಗೆ ಮಾತನಾಡಬೇಕೆಂದು ಯುವತಿ ಮೈದಾನದಲ್ಲಿ ಹಾಕಲಾಗಿದ್ದ ಲೈಟ್ ಟವರ್ ಮೇಲೆ ಹತ್ತಿದ್ದಾಳೆ. ತಕ್ಷಣ ಈ ದೃಶ್ಯವನ್ನು ನೋಡಿದ ತಕ್ಷಣ ಪ್ರಧಾನಿ ಮೋದಿ, ಯುವತಿಯ ಜೀವಕ್ಕೆ ಅಪಾಯವಾಗಬಹುದು ಎಂದು ಹೇಳಿ ಕೆಳಗೆ ಇಳಿಯುವಂತೆ ಪದೇ ಪದೇ ವಿನಂತಿಸಿದರು.

ಇದನ್ನೂ ಓದಿ: ರಾಜಕೀಯದಲ್ಲಿ ಯಾರೂ ಶಾಶ್ವತವಾಗಿರಲು ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

Advertisement

Advertisement

ಇದು ಸರಿಯಲ್ಲ,  ನಾವು ನಿಮ್ಮೊಂದಿಗಿದ್ದೇವೆ. ದಯವಿಟ್ಟು ಕೆಳಗೆ ಇಳಿಯಿರಿ, ನಾನು ನಿನ್ನ ಮಾತನ್ನು ಕೇಳುತ್ತೇನೆ. ಅದು ಶಾರ್ಟ್ ಸರ್ಕಿಟ್ ಆಗುವ ಸ್ಥಳ, ದಯವಿಟ್ಟು ಕೆಳಗೆ ಇಳಿಯಿರಿ.ಹೀಗೆ ಮಾಡುವುದರಿಂದ ಏನು ಪ್ರಯೋಜನವಲ್ಲಾ, ನಿಮಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಎಂದು ಪ್ರಧಾನಿ ಮೋದಿ ಯುವತಿಗೆ ಹೇಳಿದರು. ಬಳಿಕ ಆ ಯುವತಿ ಟವರ್ ಮೇಲಿಂದ ಕೆಳಗೆ ಇಳಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments