ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: 17 ವರ್ಷದ ಹುಡುಗನಿಗೆ 55 ಬಾರಿ ಇರಿದು, ಕತ್ತು ಸೀಳಿ ಕೊಂದ 16ರ ಬಾಲಕ; ಭೀಕರ ಕೃತ್ಯದ ನಡುವೆ ಡ್ಯಾನ್ಸ್ ಮಾಡಿ ವಿಕೃತಿ!

ಈ ವಾರದ ಆರಂಭದಲ್ಲಿ ಪೂರ್ವ ದೆಹಲಿಯ ವೆಲ್‌ಕಮ್‌ ಕಾಲೋನಿಯಲ್ಲಿ 16 ವರ್ಷದ ಯುವಕನೊಬ್ಬ, ಮತ್ತೊಬ್ಬ 17 ವರ್ಷದ ಯುವಕನಿಗೆ 55ಕ್ಕೂ ಹೆಚ್ಚು ಬಾರಿ ಇರಿದು, ಆತನ ಕತ್ತು ಸೀಳಿ ಹತ್ಯೆ ಮಾಡಿ, ಬಳಿಕ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು...

ನವದೆಹಲಿ: ಈ ವಾರದ ಆರಂಭದಲ್ಲಿ ಪೂರ್ವ ದೆಹಲಿಯ ವೆಲ್‌ಕಮ್‌ ಕಾಲೋನಿಯಲ್ಲಿ 16 ವರ್ಷದ ಯುವಕನೊಬ್ಬ, ಮತ್ತೊಬ್ಬ 17 ವರ್ಷದ ಯುವಕನಿಗೆ 55ಕ್ಕೂ ಹೆಚ್ಚು ಬಾರಿ ಇರಿದು, ಆತನ ಕತ್ತು ಸೀಳಿ ಹತ್ಯೆ ಮಾಡಿ, ಬಳಿಕ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಜಂತಾ ಮಜ್ದೂರ್ ಕಾಲೋನಿಯಲ್ಲಿ ನಡೆದ ಈ ಭೀಕರ ಹತ್ಯೆಯ ಕೆಲವು ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಸುತ್ತಮುತ್ತಲಿನ ಜನರಿಗೂ ಬೆದರಿಕೆ ಹಾಕಿದ್ದಾನೆ.

ಬುಧವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಲಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಬಿರಿಯಾನಿ ಖರೀದಿಸಲು ತನಗೆ ಹಣ ಕೇಳಿದ 17 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾನೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ನಾವು ಈಗಾಗಲೇ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಯುವಕ ಚಾಕುವನ್ನು ಎಲ್ಲಿಂದ ಖರೀದಿಸಿದ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.

ಮಂಗಳವಾರ ರಾತ್ರಿ 11.15ರ ಸುಮಾರಿಗೆ ಈ ಕೃತ್ಯ ನಡೆದಿದೆ. ದಾಳಿಗೊಳಗಾದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

"ಅವನು ಭೀಕರ ಕೃತ್ಯವನ್ನು ಮಾಡುವಾಗ ನೃತ್ಯ ಮಾಡುತ್ತಿದ್ದ. ಏನಾಗುತ್ತಿದೆ ಎಂದು ನೋಡಲು ಬಾಗಿಲು ತೆರೆಯಲು ಯತ್ನಿಸಿದ ಒಬ್ಬ ವ್ಯಕ್ತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ" ಎಂದು ಅಪರಾಧದ ತನಿಖೆ ನಡೆಸುತ್ತಿರವವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!