ದೇಶ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳ

Srinivasamurthy VN

ನವದೆಹಲಿ: ಇತ್ತೀಚೆಗಷ್ಟೇ ಇಳಿಕೆ ಕಂಡಿದ್ದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ.

ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 209 ರೂ ಹೆಚ್ಚಿಸಲಾಗಿದೆ. ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸತತ ಎರಡು ಬಾರಿ 250 (ಅಂದಾಜು) ರೂ ಇಳಿಕೆ ಮಾಡಿದ ನಂತರ 209 ರೂ ಹೆಚ್ಚಳವಾಗಿದೆ.

ಈ ಮೂಲಕ ಪರಿಸ್ಕೃತ ದರ ದೆಹಲಿ ಮಾರುಕಟ್ಟೆಯಲ್ಲಿ 1,731 ಕ್ಕೆ ಲಭ್ಯವಾಗುತ್ತದೆ. 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಈ ಮೂಲಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಜುಲೈನಿಂದ ಸತತ ನಾಲ್ಕು ತಿಂಗಳೂ ಹೆಚ್ಚಳ ಮಾಡಿದಂತಾಗಿದೆ.

ಭಾನುವಾರವಷ್ಟೇ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆ ಮಾನದಂಡಗಳಿಗನುಗುಣವಾಗಿ ಈ ಹೆಚ್ಚಳ ಆಗಿದೆ ಎಂದು ತೈಲ ನಿಗಮಗಳು ಹೇಳಿವೆ.

ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1,522.50 ರಿಂದ 1,731.50 ರೂಗೆ ಹೆಚ್ಚಿಸಲಾಗಿದೆ. ನಗರಗಳಾದ್ಯಂತ ಎಲ್ಪಿಜಿ ಗ್ಯಾಸ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಮುಂಬೈನಲ್ಲಿ 19ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,684 ರೂ ಆಗಲಿದೆ.

ಗಮನಾರ್ಹವಾಗಿ, ಸೆಪ್ಟೆಂಬರ್ 1 ರಂದು, ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 158 ರೂ ರಷ್ಟು ಕಡಿತಗೊಳಿಸಿತ್ತು, ಆಗಸ್ಟ್ 1 ರಂದು 19 ಕೆಜಿ ಸಿಲಿಂಡರ್‌ನ ಬೆಲೆ 99.75 ರೂ ರಷ್ಟು ಕಡಿಮೆಯಾಗಿದೆ.
 

SCROLL FOR NEXT