ಸಾಂದರ್ಭಿಕ ಚಿತ್ರ 
ದೇಶ

ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ ಪ್ರಕರಣ: ಮಾಸ್ಟರ್ ಮೈಂಡ್ ನನ್ನು ಬಂಧಿಸಿದ ಸಿಬಿಐ

ಮಣಿಪುರಿ ವಿದ್ಯಾರ್ಥಿಗಳಿಬ್ಬರು ನಾಪತ್ತೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ಪುಣೆಯ 22 ವರ್ಷದ ವ್ಯಕ್ತಿಯನ್ನು ಸಿಬಿಐ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಮಣಿಪುರಿ ವಿದ್ಯಾರ್ಥಿಗಳಿಬ್ಬರು ನಾಪತ್ತೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ಪುಣೆಯ 22 ವರ್ಷದ ವ್ಯಕ್ತಿಯನ್ನು ಸಿಬಿಐ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐನ ವಿಶೇಷ ತನಿಖಾ ತಂಡವು ಬುಧವಾರ ಪುಣೆಯಿಂದ ಪೌಲುನ್ಮಾಂಗ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಗುವಾಹಟಿಗೆ ಕರೆದೊಯ್ದಿದೆ ಎಂದು ಅವರು ಹೇಳಿದರು.

ವಿಶೇಷ ನ್ಯಾಯಾಲಯ ಆತನನ್ನು ಅಕ್ಟೋಬರ್ 16ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಪೌಲುನ್ಮಾಂಗ್ ಎಂದು ಸಿಬಿಐ ಶಂಕಿಸಿದೆ ಎಂದು ಅವರು ಹೇಳಿದರು.

ಕೇಂದ್ರೀಯ ಸಂಸ್ಥೆಯು ಅಕ್ಟೋಬರ್ 1 ರಂದು ಇಬ್ಬರು ಪುರುಷರು, ಪಾವೊಮಿನ್ಲುನ್ ಹಾಕಿಪ್ ಮತ್ತು ಸ್ಮಾಲ್ಸಮ್ ಹಾಕಿಪ್ ಮತ್ತು ಇಬ್ಬರು ಮಹಿಳೆಯರಾದ ಲಿಂಗ್ನಿಚಾಂಗ್ ಬೈಟೆಕುಕಿ ಮತ್ತು ಟಿನ್ನಿಲಿಂಗ್ ಹೆಂಥಾಂಗ್ ಅವರನ್ನು ಬಂಧಿಸಿತು.

20 ವರ್ಷದ ಫಿಜಾಮ್ ಹೇಮಂಜಿತ್ ಮತ್ತು 17 ವರ್ಷದ ಹುಡುಗಿ ಹಿಜಾಮ್ ಲಿಂತೋಯಿಂಗಂಬಿ ಜುಲೈ 6ರಂದು ನಾಪತ್ತೆಯಾಗಿದ್ದರು. ಅವರ ಮೃತದೇಹಗಳನ್ನು ತೋರಿಸುವ ಫೋಟೋಗಳು ಸೆಪ್ಟೆಂಬರ್ 25ರಂದು ಕಾಣಿಸಿಕೊಂಡಿತ್ತು. ಇದು ಮುಖ್ಯವಾಗಿ ವಿದ್ಯಾರ್ಥಿಗಳಿಂದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್