ಉತ್ತರಪ್ರದೇಶ: ಮರಕ್ಕೆ ಕಾರು ಡಿಕ್ಕಿ, ಮಗು ಸೇರಿ ಐವರ ದುರ್ಮರಣ
ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಖಮಾರಿಯಾ ಸೇತುವೆ ಬಳಿ ನಡೆದಿದೆ.
ಹರ್ದೋಯಿ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಖಮಾರಿಯಾ ಸೇತುವೆ ಬಳಿ ನಡೆದಿದೆ.
ಮೃತ ವ್ಯಕ್ತಿಗಳನ್ನು ರಾಜಾರಾಂ (50), ಹೊಶಿಯಾರ್ (55), ಮುಖೇಶ್ (35), ಅವರ ಮಗ ಬಲ್ಲು (4) ಮತ್ತು ಮನೋಜ್ (28) ಎಂದು ಗುರುತಿಸಲಾಗಿದೆ.
ಮೃತರು ಬಾಲಾಪುರ್ ಗೌತಿಯಾ ಗ್ರಾಮಕ್ಕೆ ಸೇರಿದವರಾಗಿದ್ದು, ಸೋಮವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ವಾಹನವನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದರು. ಘಟನೆ ಸಂಬಂಧ ಉತ್ತಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.