ಲಡಾಕ್ ನಲ್ಲಿ ರಾಹುಲ್ ಗಾಂಧಿ 
ದೇಶ

'ನನ್ನ ವಿರೋಧಿಗಳು ಸಹ ನನ್ನ ಗುರುಗಳು': ರಾಹುಲ್ ಗಾಂಧಿ

ನನ್ನ ವಿರೋಧಿಗಳನ್ನು ಕೂಡ ಶಿಕ್ಷಕರು ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಸಮಾಜದಲ್ಲಿ ಸಮಾನತೆಯ ಜ್ಞಾನವನ್ನು ನಮಗೆ ನೀಡಿದ ಮಹಾತ್ಮಾ ಗಾಂಧಿ, ಗೌತಮ ಬುದ್ಧ, ಶ್ರೀ ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ನಾನು ನನ್ನ ಗುರುಗಳು ಎಂದು ಪರಿಗಣಿಸುತ್ತೇನೆ" ಎಂದು ರಾಹುಲ್ ಗಾಂಧಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.  

ನವದೆಹಲಿ: ನನ್ನ ವಿರೋಧಿಗಳನ್ನು ಕೂಡ ಶಿಕ್ಷಕರು ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. 

ಸಮಾಜದಲ್ಲಿ ಸಮಾನತೆಯ ಜ್ಞಾನವನ್ನು ನಮಗೆ ನೀಡಿದ ಮಹಾತ್ಮಾ ಗಾಂಧಿ, ಗೌತಮ ಬುದ್ಧ, ಶ್ರೀ ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ನಾನು ನನ್ನ ಗುರುಗಳು ಎಂದು ಪರಿಗಣಿಸುತ್ತೇನೆ" ಎಂದು ರಾಹುಲ್ ಗಾಂಧಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.  

ಶಿಕ್ಷಕರ ದಿನದಂದು ಎಲ್ಲಾ ಶಿಕ್ಷಕರಿಗೆ ನನ್ನ ಗೌರವ ನಮನಗಳು. ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅವರ ಜನ್ಮದಿನದಂದು ವಿನಮ್ರ ನಮನಗಳು. ಒಬ್ಬ ಶಿಕ್ಷಕ ಜೀವನದಲ್ಲಿ ಉನ್ನತ ಮಟ್ಟವನ್ನು ಹೊಂದಿರುತ್ತಾರೆ. ಜೀವನದ ದಾರಿ ತೋರಿಸುವವರು, ಬೆಳಗುವವರು ಶಿಕ್ಷಕರು. ನೀವು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ದಾರಿ ತೋರಿಸುತ್ತಾರೆ ಎಂದಿದ್ದಾರೆ.

ಭಾರತದ ಜನರು ಸಹ ಶಿಕ್ಷಕರಂತೆ, ಅವರು ವಿವಿಧತೆಯಲ್ಲಿ ಏಕತೆಗೆ ಉದಾಹರಣೆ ನೀಡುತ್ತಾರೆ, ಪ್ರತಿ ಸಮಸ್ಯೆಯನ್ನು ಧೈರ್ಯದಿಂದ ಹೋರಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ ಮತ್ತು ನಮ್ರತೆ ಮತ್ತು ತಪಸ್ಸಿನ ಸಾಕಾರರಾಗಿದ್ದಾರೆ.

"ನಾನು ನನ್ನ ವಿರೋಧಿಗಳನ್ನು ಸಹ ನನ್ನ ಶಿಕ್ಷಕರೆಂದು ಪರಿಗಣಿಸುತ್ತೇನೆ, ಅವರ ನಡವಳಿಕೆ, ಸುಳ್ಳು ಮತ್ತು ಮಾತುಗಳಿಂದ ನಾನು ಅನುಸರಿಸುತ್ತಿರುವ ಮಾರ್ಗವು ಸಂಪೂರ್ಣವಾಗಿ ಸರಿ ಎಂದು ನನಗೆ ಕಲಿಸುತ್ತದೆ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT