ದೇಶ

ಜಿ 20 ಶೃಂಗಸಭೆ: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದೆಹಲಿಗೆ ಆಗಮನ; ಶೀಘ್ರದಲ್ಲೇ ಪ್ರಧಾನಿ ಮೋದಿ ಭೇಟಿ!

Vishwanath S

ನವದೆಹಲಿ: ನಾಳೆಯಿಂದ 18ನೇ G20 ಶೃಂಗಸಭೆಯನ್ನು ಆಯೋಜಿಸಲು ನವದೆಹಲಿ ಸಜ್ಜಾಗಿದೆ. ಇದು 25ಕ್ಕೂ ಹೆಚ್ಚು ವಿಶ್ವ ನಾಯಕರು ಮತ್ತು ಅವರ ಜೊತೆಯಲ್ಲಿರುವ ಪ್ರತಿನಿಧಿಗಳ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. 

ಜಿ20 ಶೃಂಗಸಭೆಗಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನವದೆಹಲಿಗೆ ಆಗಮಿಸಿದ್ದಾರೆ. ಅವರನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಮತ್ತು ನಾಗರಿಕ ವಿಮಾನಯಾನ ಜನರಲ್(ನಿವೃತ್ತ) ವಿ.ಕೆ.ಸಿಂಗ್ ಅವರು ಸ್ವಾಗತಿಸಿದರು.

ಜೋ ಬೈಡನ್ ಜೊತೆ ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಸಿಬ್ಬಂದಿ ಉಪ ಮುಖ್ಯಸ್ಥ ಜೆನ್ ಒ'ಮ್ಯಾಲಿ ದಿಲ್ಲನ್ ಮತ್ತು ಓವಲ್‌ನ ನಿರ್ದೇಶಕರು ಸೇರಿದಂತೆ ಏರ್ ಫೋರ್ಸ್ ಒನ್‌ನ ಪ್ರಮುಖ ವ್ಯಕ್ತಿಗಳು ಆಗಮಿಸಿದ್ದಾರೆ.

ಶೀಘ್ರದಲ್ಲೇ ಪ್ರಧಾನಿ ಮೋದಿ ಅವರನ್ನು ಜೋ ಬೈಡನ್ ಭೇಟಿಯಾಗಲಿದ್ದಾರೆ. ನಂತರ 7.45ಕ್ಕೆ ಇಬ್ಬರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಸೆಪ್ಟೆಂಬರ್ 10ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು G20 ಪ್ರೆಸಿಡೆನ್ಸಿ ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ ಹಸ್ತಾಂತರಿಸಲಿದ್ದಾರೆ. ಅಧಿಕೃತವಾಗಿ ಬ್ರೆಜಿಲ್ ನ G20 ಪ್ರೆಸಿಡೆನ್ಸಿಯ ಅವಧಿ ಡಿಸೆಂಬರ್ 1ರಿಂದ ಪ್ರಾರಂಭವಾಗಲಿದೆ.

SCROLL FOR NEXT