ದೇಶ

G20 ಶೃಂಗಸಭೆ: ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಒಪ್ಪಿಗೆ

Srinivasamurthy VN

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಮಹತ್ವದ ಜಿ20 ನಾಯಕರ ಶೃಂಗಸಭೆಯ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಈ ವೇಳೆ ಉಭಯ ನಾಯಕರು ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ "ಸ್ನೇಹದ ಹೆಗ್ಗುರುತು" ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಕಡೆಗೆ ವೇಗದಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಜಾಲತಾಣ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಮಾಹಿತಿ ನೀಡಿದ್ದು, 'ವ್ಯಾಪಾರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಹೂಡಿಕೆಯನ್ನುಉತ್ತೇಜಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಭಾರತ ಹಾಗೂ ಬ್ರಿಟನ್ ಸಮೃದ್ಧ ಮತ್ತು ಜಾಗತಿಕ ಸುಸ್ಥಿರ ಅಭಿವೃದ್ಧಿವಾಗಿ ಕೆಲಸ ಮಾಡಲಿವೆ ಎಂದು ಹೇಳಿದ್ದಾರೆ. 

ಮೂಲಗಳ ಪ್ರಕಾರ 'ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ, ನಾವೀನ್ಯತೆ ಮತ್ತು ಕೆಲವು ಕಾನ್ಸುಲರ್ ವಿಷಯಗಳು ಉಭಯ ದೇಶಗಳ ಸಭೆಯ ಕಾರ್ಯಸೂಚಿಯಲ್ಲಿನ ವಿಷಯಗಳಾಗಿವೆ. ಬ್ರಿಟಿಷ್ ಪ್ರಧಾನಿಯಾಗಿ ಭಾರತಕ್ಕೆ ತನ್ನ ಮೊದಲ ಭೇಟಿಯ ಸಂದರ್ಭದಲ್ಲಿ ಸುನಕ್ ಅವರು ಪಡೆದ "ಬೆಚ್ಚಗಿನ ಸ್ವಾಗತ" ವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. 

ಇದೇ ವಿಚಾರವಾಗಿ ಡೌನಿಂಗ್ ಸ್ಟ್ರೀಟ್ (ಬ್ರಿಟನ್ ಪ್ರಧಾನಿ ಕಾರ್ಯಾಲಯ) ವಕ್ತಾರರು ಮಾಹಿತಿ ನೀಡಿದ್ದು, "ಬ್ರಿಟನ್-ಭಾರತ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳ ಕುರಿತು ನಾಯಕರು ಉತ್ಪಾದಕ ಸಂಭಾಷಣೆಯನ್ನು ನಡೆಸಿದರು. ಪ್ರಧಾನಿ ಸುನಕ್ ಅವರು ಬ್ರಿಟನ್ ಮಹತ್ವಾಕಾಂಕ್ಷೆಯನ್ನು ಪುನರುಚ್ಚರಿಸಿದರು, ಇದು ಎರಡೂ ದೇಶಗಳಲ್ಲಿನ ವ್ಯಾಪಾರಗಳು ಮತ್ತು ಕಾರ್ಮಿಕರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಸರಕು ಮತ್ತು ಸೇವೆಗಳೆರಡರಲ್ಲೂ ನಮ್ಮ ವ್ಯಾಪಾರವನ್ನು ಬೆಳೆಸುತ್ತದೆ ಎಂದು FTA ವಕ್ತಾರರು ಹೇಳಿದರು.

ಶುಕ್ರವಾರ ಇಲ್ಲಿಗೆ ಆಗಮಿಸಿದ ಸುನಕ್, ಜಿ 20 ಶೃಂಗಸಭೆಯ ಮೊದಲ ಅಧಿವೇಶನದ ನಂತರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಇದಕ್ಕೂ ಮೊದಲು, ಸುನಕ್ ರನ್ನು ಪ್ರಧಾನಿ ಮೋದಿ ನಮಸ್ತೆಯೊಂದಿಗೆ ಸ್ವಾಗತಿಸಿದರು. ಈ ಮೊದಲು ಭಾರತಕ್ಕೆ ಆಗಮಿಸಲು ಖುಷಿಯಾಗುತ್ತಿದೆ ಎಂದು ರಿಷಿ ಸುನಕ್ ಹೇಳಿದ್ದರು. ನನ್ನ ಮೂಲ ಭಾರತವಾಗಿದ್ದು, ಈ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ್ದರು. 

SCROLL FOR NEXT