ದೇಶ

ಸೆಪ್ಟೆಂಬರ್ 14 ರಿಂದ 16 ವರೆಗೆ ಆರ್ ಎಸ್ಎಸ್ ಅಖಿಲ ಭಾರತೀಯ ಸಮನ್ವಯ ಬೈಠಕ್:  ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಚರ್ಚೆ

Srinivas Rao BV

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)  ಸೆ.14 ರಿಂದ 16 ವರೆಗೆ ಅಖಿಲ ಭಾರತೀಯ ಸಮನ್ವಯ ಬೈಠಕ್ ನಡೆಸಲಿದ್ದು,  ಸಂಘ ಪರಿವಾರದ ಸಂಘಟನೆಗಳೂ ಸಹ ಇದರಲ್ಲಿ ಭಾಗಿಯಾಗಲಿವೆ. 

ಮಹಾರಾಷ್ಟ್ರದ ಪುಣೆಯಲ್ಲಿ ಈ ಬೈಠಕ್ ಆಯೋಜನೆಯಾಗಿದ್ದು, ದೇಶ, ಧರ್ಮ ಹಾಗೂ ಸಂಸ್ಕೃತಿ ಎದುರಿಸುತ್ತಿರುವ ಪ್ರಸ್ತುತ ವಿಷಯಗಳನ್ನು ಚರ್ಚಿಸಲಾಗುತ್ತದೆ. 

ಸರಸಂಘಚಾಲಕ್ ಡಾ. ಮೋಹನ್ ಭಾಗ್ವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇತರ ಸಹ ಸರಕಾರ್ಯವಾಹರುಗಳ ನಾಯಕತ್ವದಲ್ಲಿ ಈ ಬೈಠಕ್ ನಡೆಯಲಿದೆ.  ಸಂಘದ ಇತರ ಪ್ರಮುಖ ಅಧಿಕಾರಿಗಳು ಹಾಗೂ ಸಂಘದಿಂದ ಪ್ರೇರಣೆ ಪಡೆದಿರುವ ಒಟ್ಟು 36 ಸಂಘಟನೆಗಳ ಪ್ರತಿನಿಧಿಗಳು ಈ ಬೈಠಕ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಆರ್ ಎಸ್ಎಸ್ ನ ವಾರ್ಷಿಕ ಸಮನ್ವಯ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ.

SCROLL FOR NEXT