ಮಣಿಪುರ ಹಿಂಸಾಚಾರ 
ದೇಶ

ಮಣಿಪುರ ಹಿಂಸಾಚಾರ: ಕಳೆದ ನಾಲ್ಕು ತಿಂಗಳಲ್ಲಿ 175 ಮಂದಿ ಸಾವು, 1,100ಕ್ಕೂ ಅಧಿಕ ಮಂದಿಗೆ ಗಾಯ

ಮೇ ಆರಂಭದಿಂದ ಮಣಿಪುರವನ್ನು ಬೆಚ್ಚಿಬೀಳಿಸಿದ ಜನಾಂಗೀಯ ಘರ್ಷಣೆಯಲ್ಲಿ 175 ಜನರು ಸಾವಿಗೀಡಾಗಿದ್ದು, 1,108 ಜನರು ಗಾಯಗೊಂಡಿದ್ದಾರೆ ಮತ್ತು 32 ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ: ಮೇ ಆರಂಭದಿಂದ ಮಣಿಪುರವನ್ನು ಬೆಚ್ಚಿಬೀಳಿಸಿದ ಜನಾಂಗೀಯ ಘರ್ಷಣೆಯಲ್ಲಿ 175 ಜನರು ಸಾವಿಗೀಡಾಗಿದ್ದು, 1,108 ಜನರು ಗಾಯಗೊಂಡಿದ್ದಾರೆ ಮತ್ತು 32 ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ, 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ (ಕಾರ್ಯಾಚರಣೆ) ಐಕೆ ಮುಯಿವಾ, 'ಮಣಿಪುರದ ಈ ಸವಾಲಿನ ಸಮಯದಲ್ಲಿ, ಪೊಲೀಸರು, ಕೇಂದ್ರ ಪಡೆಗಳು ಮತ್ತು ನಾಗರಿಕ ಆಡಳಿತವು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಹಗಲಿರುಳು ಪ್ರಯತ್ನಿಸುತ್ತಿದೆ ಎಂದು ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತೇವೆ. ನಾಪತ್ತೆಯಾಗಿದ್ದ ಶಸ್ತ್ರಾಸ್ತ್ರಗಳಲ್ಲಿ 1,359 ಬಂದೂಕುಗಳು ಮತ್ತು 15,050 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹಿಂಸಾಚಾರದ ಸಂದರ್ಭದಲ್ಲಿ ಗಲಭೆಕೋರರು ಪೊಲೀಸರ ಬಳಿಯಿದ್ದ ದೊಡ್ಡ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

5,172 ಅಗ್ನಿಸ್ಪರ್ಶ ಪ್ರಕರಣಗಳು ವರದಿಯಾಗಿವೆ. 254 ಚರ್ಚ್‌ಗಳು ಮತ್ತು 132 ದೇವಾಲಯಗಳು ಸೇರಿದಂತೆ 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಮುಯಿವಾ ಹೇಳಿದರು.

ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈಯಿಂದ ಚುರಚಂದಪುರ ಜಿಲ್ಲೆಯ ಕಾಂಗ್‌ವೈವರೆಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಐಜಿಪಿ (ಆಡಳಿತ) ಕೆ ಜಯಂತ ಮಾತನಾಡಿ, ಮೃತಪಟ್ಟ 175 ಜನರ ಪೈಕಿ ಒಂಬತ್ತು ಮಂದಿ ಇನ್ನೂ ಪತ್ತೆಯಾಗಿಲ್ಲ. ಈಪೈಕಿ 79 ಮೃತ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ಕುಟುಂಬಗಳು ಮೃತದೇಹಗಳನ್ನು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. 96 ಮೃತ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. RIMS ಮತ್ತು JNIMS (ಇಂಫಾಲ್‌ನ ಆಸ್ಪತ್ರೆಗಳು) ಗಳಲ್ಲಿ ಕ್ರಮವಾಗಿ 28 ಮತ್ತು 26 ದೇಹಗಳನ್ನು ಇರಿಸಲಾಗಿದೆ. ಆದರೆ, 42 ಚುರಾಚಂದ್‌ಪುರ ಆಸ್ಪತ್ರೆಯಲ್ಲಿವೆ. ಸದ್ಯ 9,332 ಪ್ರಕರಣಗಳು ದಾಖಲಾಗಿದ್ದು, 325 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT