ರಮೇಶ್ ಬಿಧುರಿ 
ದೇಶ

ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧದ ದೂರು ಹಕ್ಕುಚ್ಯುತಿ ಸಮಿತಿಗೆ ರವಾನಿಸಿದ ಸ್ಪೀಕರ್

ಲೋಕಸಭೆಯಲ್ಲೇ ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರನ್ನು ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಿದ್ದ ಬಿಜೆಪಿ ಸಂಸದ ರಮೇಶ್‌ ಬಿಧುರಿ ವಿರುದ್ಧದ ದೂರುಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಾರೆ...

ನವದೆಹಲಿ: ಲೋಕಸಭೆಯಲ್ಲೇ ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರನ್ನು ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಿದ್ದ ಬಿಜೆಪಿ ಸಂಸದ ರಮೇಶ್‌ ಬಿಧುರಿ ವಿರುದ್ಧದ ದೂರುಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಅಲಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ನಾಯಕಿ ಕನಿಮೋಳಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಬಿಧುರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ನಿಶಿಕಾಂತ್ ದುಬೆಯಂತಹ ಹಲವು ಬಿಜೆಪಿ ಸಂಸದರು, ಬಿಎಸ್‌ಪಿ ಸಂಸದರೇ ಬಿಧುರಿ ಅವರು ಸದನದಲ್ಲಿ ಮಾತನಾಡುವಾಗ "ಪ್ರಚೋದನೆ" ನೀಡಿದ್ದಾರೆ. ಈ ಅಂಶವನ್ನು ಸಹ ಸ್ಪೀಕರ್ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರು ಈ ಎಲ್ಲಾ ದೂರುಗಳನ್ನು ಬಿಜೆಪಿ ಸಂಸದ ಸುನಿಲ್ ಕುಮಾರ್ ಸಿಂಗ್ ನೇತೃತ್ವದ ಹಕ್ಕುಚ್ಯುತಿ ಸಮಿತಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಕ್ಕಾಗಿ ಸ್ಪೀಕರ್‌ಗೆ ಧನ್ಯವಾದ ಎಂದು ದುಬೆ ಅವರು ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!