ರೈತರ ಪ್ರತಿಭಟನೆ
ರೈತರ ಪ್ರತಿಭಟನೆ 
ದೇಶ

ಲೋಕಸಭೆ ಚುನಾವಣೆ: ಬಿಜೆಪಿ ವಿರುದ್ಧ ಪಂಜಾಬ್‌ನ ಎಲ್ಲ ಗ್ರಾಮಗಳಲ್ಲಿ ರೈತ ಸಂಘಟನೆ ಪೋಸ್ಟರ್ ಅಭಿಯಾನ

Ramyashree GN

ಚಂಡೀಗಢ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೈತ ಸಂಘಗಳ ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪಂಜಾಬ್‌ನಾದ್ಯಂತ ಎಲ್ಲ ಗ್ರಾಮಗಳಲ್ಲಿ ಪ್ರಶ್ನಾವಳಿಗಳೊಂದಿಗೆ ಪೋಸ್ಟರ್‌ಗಳು ಮತ್ತು ಕರಪತ್ರಗಳನ್ನು ವಿನ್ಯಾಸಗೊಳಿಸಿ ಹಾಕುತ್ತಿದೆ.

ಪೋಸ್ಟರ್‌ಗಳಲ್ಲಿ ಬಿಜೆಪಿಗೆ ಪ್ರಶ್ನೆಗಳನ್ನು ಒಡ್ಡಲಾಗುತ್ತಿದ್ದು, ಪರಿಣಾಮವಾಗಿ ಈಗಾಗಲೇ ಸಿಖ್ ಸಮುದಾಯದ ವಿಶ್ವಾಸ ಗಳಿಸಲು ಹೆಣಗಾಡುತ್ತಿರುವ ಕೇಸರಿ ಪಕ್ಷಕ್ಕೆ ರಾಜ್ಯದ ಎಲ್ಲ ಹಳ್ಳಿಗಳಾದ್ಯಂತ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಿದೆ. ಬಿಜೆಪಿ ನಡೆಯನ್ನು ಬಯಲಿಗೆಳೆಯಿರಿ, ಬಿಜೆಪಿಯನ್ನು ವಿರೋಧಿಸಿ ಮತ್ತು ಬಿಜೆಪಿಯನ್ನು ಶಿಕ್ಷಿಸಿ ಎಂದು ಹೇಳಲಾಗುತ್ತಿದೆ.

ಅಖಿಲ ಭಾರತ ಕಿಸಾನ್ ಫೆಡರೇಶನ್‌ನ ಅಧ್ಯಕ್ಷ ಪ್ರೇಮ್ ಸಿಂಗ್ ಭಂಗು ಮತ್ತು ಬಿಕೆಯು (ಲಖೋವಾಲ್) ನ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ಎಸ್‌ಕೆಎಂ ನಾಯಕ ಹರಿಂದರ್ ಸಿಂಗ್ ಲಖೋವಾಲ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಹಿರಿಯ ನಾಯಕರು, ಮೇ 21 ರಂದು ಜಾಗರಾನ್‌ನಲ್ಲಿ ನಡೆಯಲಿರುವ ಬಿಜೆಪಿ ವಿರೋಧಿ ರ್ಯಾಲಿಯನ್ನು ಯಶಸ್ವಿಗೊಳಿಸಲು ನಿರ್ಧರಿಸಿದ್ದಾರೆ. ರೈತರನ್ನು ಒಗ್ಗೂಡಿಸಲು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುವುದು. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಶ್ನಾವಳಿ ಸಿದ್ಧಪಡಿಸಿ ಕರಪತ್ರಗಳನ್ನು ಮುದ್ರಿಸಿ ಜನರಲ್ಲಿ ಹಂಚಲು ತೀರ್ಮಾನಿಸಲಾಗಿದೆ.

ಇದಕ್ಕಾಗಿ ಬಲ್ಬೀರ್ ಸಿಂಗ್ ರಾಜೇವಾಲ್, ಪ್ರೇಮ್ ಸಿಂಗ್ ಭಂಗು, ರವನೀತ್ ಸಿಂಗ್ ಬ್ರಾರ್, ಬಲದೇವ್ ಸಿಂಗ್ ನಿಹಾಲ್ಗಢ್ ಮತ್ತು ಅಂಗ್ರೇಜ್ ಸಿಂಗ್ ಅವರನ್ನು ಒಳಗೊಂಡ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಏಪ್ರಿಲ್ 9 ರಂದು ಚಂಡೀಗಢದಲ್ಲಿ ಸಭೆ ಸೇರಲಿದೆ.

ಹಳ್ಳಿಗಳಲ್ಲಿ ಪ್ರಚಾರ

ರೈತರನ್ನು ಒಗ್ಗೂಡಿಸಲು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುವುದು. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಶ್ನಾವಳಿ ಸಿದ್ಧಪಡಿಸಿ ಕರಪತ್ರಗಳನ್ನು ಮುದ್ರಿಸಿ ಜನರಿಗೆ ಹಂಚಲಾಗುವುದು. ಬಿಜೆಪಿ ನಾಯಕರು ಗ್ರಾಮಗಳಿಗೆ ಭೇಟಿ ನೀಡಿದಾಗ ಉತ್ತರಿಸಬೇಕಾದ 8 ರಿಂದ 10 ಪ್ರಶ್ನೆಗಳನ್ನು ಒಳಗೊಂಡಿರುವ ಈ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಎಲ್ಲ ಗ್ರಾಮಗಳಲ್ಲಿ ಅಂಟಿಸಲಾಗುತ್ತದೆ.

SCROLL FOR NEXT