ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ 
ದೇಶ

ಕಾಶ್ಮೀರದ ಮೂರು ಕ್ಷೇತ್ರಗಳಿಗೆ ಪಿಡಿಪಿ ಅಭ್ಯರ್ಥಿ ಘೋಷಣೆ; ಅನಂತನಾಗ್‌ನಲ್ಲಿ ಆಜಾದ್ ವಿರುದ್ಧ ಮಾಜಿ ಸಿಎಂ ಮೆಹಬೂಬಾ ಕಣಕ್ಕೆ

Lingaraj Badiger

ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ) ಕಾಶ್ಮೀರದ ಮೂರು ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಅಭ್ಯರ್ಥಿಗಳನ್ನು ಘೋಷಿಸಿದ್ದು, ಪಕ್ಷದ ಅಧ್ಯಕ್ಷೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ವಿರುದ್ಧ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ರಚನೆಯಾದ ಕ್ಷೇತ್ರ ಅನಂತನಾಗ್-ರಾಜೌರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ನ್ಯಾಷನಲ್ ಕಾನ್ಫರೆನ್ಸ್ ಈ ಸ್ಥಾನದಿಂದ ಪ್ರಭಾವಿ ಗುಜ್ಜರ್ ನಾಯಕ ಮಿಯಾನ್ ಅಲ್ತಾಫ್ ಅಹ್ಮದ್ ಅವರನ್ನು ಕಣಕ್ಕಿಳಿಸಿದೆ ಮತ್ತು ಅಪ್ನಿ ಪಕ್ಷ, ಜಾಫರ್ ಇಕ್ಬಾಲ್ ಮನ್ಹಾಸ್ ಅವರಿಗೆ ಟಿಕೆಟ್ ನೀಡಿದೆ. ಆದರೆ ಬಿಜೆಪಿ ಇದುವರೆಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಪಕ್ಷದ ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ಶ್ರೀನಗರದಿಂದ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಮೀರ್ ಫಯಾಜ್ ಬಾರಾಮುಲ್ಲಾದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಪಿಡಿಪಿ ಸಂಸದೀಯ ಮಂಡಳಿ ಮುಖ್ಯಸ್ಥ ಸರ್ತಾಜ್ ಮದ್ನಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೆಹಬೂಬಾ ಮುಫ್ತಿ ಮತ್ತು ಮದ್ನಿ ಅವರು ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದರು.

ಜಮ್ಮು ಪ್ರದೇಶದ ಉಧಂಪುರ ಮತ್ತು ಜಮ್ಮುವಿನ ಎರಡು ಕ್ಷೇತ್ರಗಳಲ್ಲಿ ಪಿಡಿಪಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT