ರಾಜ್ ಕುಮಾರ್ ಆನಂದ್
ರಾಜ್ ಕುಮಾರ್ ಆನಂದ್ 
ದೇಶ

ಭ್ರಷ್ಟಾಚಾರ ಉಲ್ಲೇಖಿಸಿ ದೆಹಲಿ ಸಚಿವ ಆನಂದ್ ರಾಜೀನಾಮೆ; ಇದು ಎಎಪಿ 'ಅಂತ್ಯಕ್ಕೆ ನಾಂದಿ' ಎಂದ ಬಿಜೆಪಿ

Lingaraj Badiger

ನವದೆಹಲಿ: ಭ್ರಷ್ಟಾಚಾರ ವಿರೋಧಿ ಬಣ "ಭ್ರಷ್ಟಾಚಾರದಲ್ಲಿ ಮುಳುಗಿದೆ". ಇದು ಪಕ್ಷಕ್ಕೆ ಪಕ್ಷದ ಅವನತಿಗೆ ಕಾರಣವಾಗಲಿದೆ ಎಂದು ಆರೋಪಿಸಿ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಅವರು ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಪಕ್ಷ ದಲಿತ ಸಚಿವರು, ಶಾಸಕರು ಮತ್ತು ಕೌನ್ಸಿಲರ್‌ಗಳನ್ನು ಗೌರವಿಸುವುದಿಲ್ಲ. ಪಕ್ಷದಲ್ಲಿ ನಾಯಕತ್ವದ ಸ್ಥಾನಗಳನ್ನು ನೀಡುವಲ್ಲಿ ಎಎಪಿ "ತಾರತಮ್ಯ ಮಾಡುತ್ತಿದೆ ಎಂದು ರಾಜ್ ಕುಮಾರ್ ಆನಂದ್ ಆರೋಪಿಸಿದ್ದಾರೆ.

ಇನ್ನು ಆನಂದ್ ಅವರ ರಾಜೀನಾಮೆ ಆಮ್ ಆದ್ಮಿ ಪಕ್ಷದ 'ಅಂತ್ಯಕ್ಕೆ ನಾಂದಿ' ಎಂದು ಭಾರತೀಯ ಜನತಾ ಪಕ್ಷದ ದೆಹಲಿ ಘಟಕ ಟೀಕಿಸಿದೆ.

ಅರವಿಂದ್ ಕೇಜ್ರಿವಾಲ್ ಅವರು 2011 ರಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಪ್ರಾರಂಭಿಸಿದ ದೆಹಲಿಯ ಜನತೆಗೆ ವಂಚನೆಯ ಕಥೆ ಅಂತ್ಯವಾಗಲಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಣ್ಣಾ ಹಜಾರೆ ಅವರ ಆಂದೋಲನದಿಂದಲೂ ಅರವಿಂದ್ ಕೇಜ್ರಿವಾಲ್ ಜೊತೆಗಿದ್ದ ಆನಂದ್ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಆತ್ಮಸಾಕ್ಷಿಯ ಮಾತು ಕೇಳಿದ್ದಾರೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಹೇಳಿದ್ದಾರೆ.

ಕೇಜ್ರಿವಾಲ್ ತಮ್ಮ ಸಚಿವರಿಂದಾದರೂ ಪಾಠ ಕಲಿಯಬೇಕು ಎಂದು ಕೇಸರಿ ಪಕ್ಷದ ಮತ್ತೊಬ್ಬ ನಾಯಕ ಹೇಳಿದ್ದಾರೆ. ಒಂದು ಕಡೆ ಭ್ರಷ್ಟನಾಗಿದ್ದರೂ ತನ್ನ ಹುದ್ದೆಯನ್ನು ಬಿಡದ ಕೇಜ್ರಿವಾಲ್, ಮತ್ತೊಂದೆಡೆ ತಮ್ಮ ನಾಯಕನ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಇದು ಎಎಪಿ ಪತನದ ಸಂಕೇತ ಎಂದೂ ಅವರು ಹೇಳಿದ್ದಾರೆ. "ಅದೃಷ್ಟವಶಾತ್, ಕೇಜ್ರಿವಾಲ್ ಅವರ ನಿಜವಾದ ಮುಖ ಈಗ ಅವರ ಪಕ್ಷದ ಸದಸ್ಯರಿಗೂ ಗೋಚರಿಸುತ್ತದೆ" ಎಂದು ಬಿಜೆಪಿ ನಾಯಕ ವ್ಯಂಗ್ಯವಾಡಿದ್ದಾರೆ.

SCROLL FOR NEXT