ಎಸ್ ಬಿಐ
ಎಸ್ ಬಿಐ  online desk
ದೇಶ

RTI ಕಾಯ್ದೆಯಡಿ ಚುನಾವಣಾ ಬಾಂಡ್ ಗಳ ವಿವರ ನೀಡಲು SBI ನಕಾರ

Srinivas Rao BV

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಆರ್ ಟಿಐ ಅಡಿಯಲ್ಲಿ ಚುನಾವಣಾ ಬಾಂಡ್ ಗಳ ವಿವರಗಳನ್ನು ನೀಡುವುದಕ್ಕೆ ನಿರಾಕರಿಸಿದೆ. ದಾಖಲೆಗಳು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿದ್ದು, ಸಾರ್ವಜನಿಕವಾಗಿ ಲಭ್ಯವಿದ್ದರೂ ವಿಶ್ವಾಸಾರ್ಹ ಆಧಾರದಲ್ಲಿ ವೈಯಕ್ತಿಕ ಮಾಹಿತಿ ಇರುವ ಕಾರಣ ಅದನ್ನು ಆರ್ ಟಿಐ ನಲ್ಲಿ ನೀಡಲಾಗುವುದಿಲ್ಲ ಎಂದು ಹೇಳಿದೆ.

ಚುನಾವಣಾ ಬಾಂಡ್‌ಗಳ ಯೋಜನೆ "ಅಸಂವಿಧಾನಿಕ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ" ಎಂಬುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಫೆಬ್ರವರಿ 15 ರಂದು ಎಸ್‌ಬಿಐಗೆ ನಿರ್ದೇಶನ ನೀಡಿತ್ತು ಅಷ್ಟೇ ಅಲ್ಲದೇ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾರ್ಚ್ 13 ರಂದು ಪ್ರಕಟಿಸಬೇಕೆಂದು ಹೇಳಿತ್ತು.

ಮಾರ್ಚ್ 11 ರಂದು, ಗಡುವಿನ ವಿಸ್ತರಣೆಯನ್ನು ಕೋರಿ ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಆರ್‌ಟಿಐ ಕಾರ್ಯಕರ್ತ ಕಮೋಡೋರ್ (ನಿವೃತ್ತ) ಲೋಕೇಶ್ ಬಾತ್ರಾ ಮಾರ್ಚ್ 13 ರಂದು ಎಸ್‌ಬಿಐ ನ್ನು ಸಂಪರ್ಕಿಸಿ, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಇಸಿಗೆ ಒದಗಿಸಿದಂತೆ ಡಿಜಿಟಲ್ ರೂಪದಲ್ಲಿ ಚುನಾವಣಾ ಬಾಂಡ್‌ಗಳ ಸಂಪೂರ್ಣ ಡೇಟಾವನ್ನು ಕೋರಿದರು.

ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ ಅಡಿಯಲ್ಲಿ ನೀಡಲಾದ ಎರಡು ವಿನಾಯಿತಿ ಷರತ್ತುಗಳನ್ನು ಉಲ್ಲೇಖಿಸಿ ಬ್ಯಾಂಕ್ ಮಾಹಿತಿಯನ್ನು ನಿರಾಕರಿಸಿದೆ.

SCROLL FOR NEXT