ನವದೆಹಲಿ: ಕನಿಷ್ಠ 250ಕ್ಕೂ ಅಧಿಕ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ವಯನಾಡ್ ಭೂಕುಸಿತದ ಮೊದಲು ಮತ್ತು ನಂತರದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದ್ದು, ಉಪಗ್ರಹ ಚಿತ್ರಗಳ ಪ್ರಕಾರ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದ್ದು, ಹೀಗಾಗಿ ಇಷ್ಟೂ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಇಸ್ರೋ ಅಭಿಪ್ರಾಯಪಟ್ಟಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ. ಭಾರೀ ದೊಡ್ಡ ಪ್ರಮಾಣದ ಕುಸಿತ ಎಂಬು ಚಿತ್ರಗಳ ಮೂಲಕ ಸ್ಪಷ್ಟವಾಗಿದೆ. ಮಾತ್ರವಲ್ಲ ಮೋಡವು ಅತೀ ಕೆಳಭಾಗದಲ್ಲಿ ಇರುವುದು.
ಕೂಡಾ ಗೋಚರಿಸುತ್ತಿದ್ದು, ಭೂಕುಸಿತದಲ್ಲಿ ಬರೊಬ್ಬರಿ 86,000 ಚದರ ಮೀಟರ್‌ಗಳಷ್ಟು ಭೂಮಿಯೇ ಸ್ಥಳಾಂತರವಾಗಿದೆ. ಇರುವಜಿಂಜಿಪುಳ ನದಿಯ ಉದ್ದಕ್ಕೂ ಸುಮಾರು 8 ಕಿಲೋಮೀಟರ್‌ಗಳಷ್ಟು ಶಿಲಾಖಂಡರಾಶಿಗಳು ಹರಿಯುತ್ತಿವೆ. ಭೂಕುಸಿತದ ಎರಡು ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಭೂಕುಸಿತ ವಿನಾಶವನ್ನು ಸೆರೆಹಿಡಿಯಲು, ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹ ಮತ್ತು ಮೋಡದ ಹೊದಿಕೆಯನ್ನು ಭೇದಿಸಬಲ್ಲ RISAT ಉಪಗ್ರಹವನ್ನು ನಿಯೋಜಿಸಿದೆ.
ಕಾರ್ಟೊಸ್ಯಾಟ್-3 ಉಪಗ್ರಹವು ಮೇ 22 ರಂದು ಪೂರ್ವಭಾವಿ ಚಿತ್ರಗಳನ್ನು ಸೆರೆಹಿಡಿದಿತ್ತು. ಆದರೆ RISAT ಉಪಗ್ರಹವು ಜುಲೈ 31 ರಂದು ಭೂಕುಸಿತದ ಒಂದು ದಿನದ ನಂತರ ಘಟನೆಯ ನಂತರದ ಚಿತ್ರಗಳನ್ನು ಸೆರೆಹಿಡಿದಿದೆ.
ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು (11850) ಎರಡು ಭೂಕುಸಿತ ಪರಿಣಾಮದ ಬಗ್ಗೆ ಗಮನಿಸಲು ಈ ಚಿತ್ರವನ್ನು ಹತ್ತಿರದಿಂದ ಸೆರೆಹಿಡಿದಿದೆ. ಜುಲೈ 31 ರಂದು ತೆಗೆದ ಅತಿ ಹೆಚ್ಚು ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಭೂಕುಸಿತದ ಚಿತ್ರಣವು ಸ್ಪಷ್ಟವಾಗಿದೆ. ಎನ್‌ಆರ್‌ಎಸ್‌ಸಿ ಪ್ರಕಾರ, ಚೂರಲ್‌ಮಲಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಈ ಹಾನಿಯಾಗಿದೆ. ಮೋಡವು ಬೆಟ್ಟದ ಹತ್ತಿರದಲ್ಲಿಯೇ ಇರುವುದು ಭಾರೀ ಮಳೆ ಒಮ್ಮೆಲೇ ಸುರಿದಿದೆ. ಇದು ಅವಘಡಕ್ಕೆ ಕಾರಣವಾಗಿದೆ ಎಂದು ಇಸ್ರೋ ಹೇಳಿದೆ.
ಈ ಹಿಂದೆ ಭೂಕುಸಿತ ಸಂಭವಿಸಿದ್ದ ಜಾಗದಲ್ಲೇ ಮತ್ತೆ ಭೂಕುಸಿತ
ಇನ್ನು ಉಪಗ್ರಹದ ಮಾಹಿತಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಅದೇ ಸ್ಥಳದಲ್ಲೇ ಭೂ ಕುಸಿತವಾಗಿದೆ ಎಂದು ಹೇಳಲಾಗಿದೆ. ಭೂಕುಸಿತದಂತಹ ವಿಪತ್ತುಗಳು ಪ್ರದೇಶದ ದುರ್ಬಲತೆಯನ್ನು ಒತ್ತಿಹೇಳುತ್ತದೆ.
ಇನ್ನು ವಯನಾಡಿನಲ್ಲಿ ಮೂರನೇ ದಿನವೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದ್ದು, ಮಂಗಳವಾರದ ಭೂಕುಸಿತದಿಂದ ಸಾವಿನ ಸಂಖ್ಯೆ 277 ಕ್ಕೆ ಏರಿದೆ ಮತ್ತು ಕನಿಷ್ಠ 240 ಜನರು ಇನ್ನೂ ಕಾಣೆಯಾಗಿದ್ದಾರೆ. 256 ಶವಪರೀಕ್ಷೆ ಪೂರ್ಣಗೊಂಡಿದ್ದು, 154 ಶವಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.