ನವದೆಹಲಿ: ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಗೆ ಹೆಚ್ಚು ಸಮರ್ಥರು ಎಂದು ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಸೋಮವಾರ ಹೇಳಿದ್ದಾರೆ. ಆದರೆ, ಈ ವಿಷಯದಲ್ಲಿ ಅಂತಿಮ ನಿರ್ಧಾರ ಇಂಡಿಯಾ ಮೈತ್ರಿಕೂಟಕ್ಕೆ ಬಿಟ್ಟದ್ದು ಎಂದಿದ್ದಾರೆ.
ಐಎಎನ್‌ಎಸ್‌ನೊಂದಿಗಿನ ವಿಶೇಷ ಸಂವಾದದಲ್ಲಿ ಅವರು, ಹಲವು ಬಾರಿ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ, ದೃಢವಾದ ಅಭಿಪ್ರಾಯ ಹೊಂದಿರುವ ಫೈರ್‌ಬ್ರಾಂಡ್ ನಾಯಕಿ. ಅವರು ಯಾವುದಾದರೂ ದೃಢ ನಿರ್ಧಾರ ತೆಗೆದುಕೊಂಡರೆ ಆಕೆಯ ಮನಸ್ಸನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಜನರೊಟ್ಟಿಗಿನ ಸಂಪರ್ಕದೊಂದಿಗೆ ಅವರು ತಳಮಟ್ಟದಿಂದ ಗುರುತಿಸಿಕೊಂಡಿರುವುದನ್ನು ಶ್ಲಾಘಿಸಿದ ಶತ್ರುಘ್ನ ಸಿನ್ಹಾ, ಪ್ರಧಾನಿ ಹುದ್ದೆ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ಅವರು ಅಥವಾ ಇಂಡಿಯಾ ಮೈತ್ರಿಕೂಟ ಮಾತ್ರ ತೆಗೆದುಕೊಳ್ಳಬಹುದು ಎಂದರು.
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಗಮನಾರ್ಹವಾಗಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿಯ 240 ಸ್ಥಾನಗಳಿಗಿಂತ ಕಡಿಮೆ ಸೀಟು ಪಡೆದಿದ್ದರೂ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸಂಪೂರ್ಣವಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿವೆ.