ನವದೆಹಲಿ: ಭಾರತಕ್ಕೆ ಆಗಮಿಸಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಮ್ ಜೊತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.
ದ್ವಿಪಕ್ಷೀಯ ಸಭೆ ಬಳಿಕ ಮಾತನಾಡಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಮ್ ಭಾರತಕ್ಕೆ ಬೇಕಾಗಿರುವ ಜಾಕಿರ್ ನಾಯ್ಕ್ ಗಡಿಪಾರು ವಿಷಯದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ಇಸ್ಲಾಮಿಕ್ ಮತ ಪ್ರಚಾರಕ ಜಾಕಿರ್ ನಾಯ್ಕ್ ಅವರ ಗಡಿಪಾರು ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ಯಾವುದೇ ಸಾಕ್ಷ್ಯ, ದಾಖಲೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅನ್ವರ್ ಇಬ್ರಾಹಿಮ್ ಹೇಳಿದ್ದಾರೆ.
ಜಾಕಿರ್ ನಾಯ್ಕ್ ಮಲೇಷ್ಯಾದಲ್ಲಿ ಭಾರತದ ವಿರುದ್ಧ ವಿವಾದಾತ್ಮಕವಾಗಿ ಮಾತನಾಡಿಲ್ಲ ಎಂದು ಅನ್ವರ್ ಇಬ್ರಾಹಿಂ ಹೇಳಿದ್ದಾರೆ.
"ಝಾಕಿರ್ ನಾಯ್ಕ್ ಎಲ್ಲಿಯವರೆಗೆ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಅಥವಾ ಭದ್ರತೆಗೆ ಆತಂಕವೊಡ್ಡುವುದಿಲ್ಲವೋ ಅಲ್ಲಿಯವರೆಗೆ ನಾವು ಈ ವಿಷಯವನ್ನು ಬಿಡುತ್ತೇವೆ. ಆದರೆ ಕಾನೂನಿನಡಿಯಲ್ಲಿ ಅವರನ್ನು ಹಸ್ತಾಂತರಿಸಲು ಭಾರತ ನೀಡುವ ಯಾವುದೇ ಪುರಾವೆಗಳಿಗೆ ನಾವು ಮುಕ್ತರಾಗಿದ್ದೇವೆ" ಎಂದು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಇಬ್ರಾಹಿಂ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಭೇಟಿಯ ವೇಳೆ ಝಾಕಿರ್ ನಾಯಕ್ ಹಸ್ತಾಂತರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಮಲೇಷ್ಯಾ ಪ್ರಧಾನಿ ಹೇಳಿದ್ದಾರೆ.