ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ online desk
ದೇಶ

UPS: U ಅಂದರೆ ಮೋದಿ ಸರ್ಕಾರದ ಯು-ಟರ್ನ್, ಕಾಂಗ್ರೆಸ್ ವ್ಯಂಗ್ಯ; ಯೋಜನೆ ಬಗ್ಗೆ ವಿಪಕ್ಷದಲ್ಲೇ ಭಿನ್ನಾಭಿಪ್ರಾಯ!

UPS ದಲಿತರು, ಬುಡಕಟ್ತು ಹಾಗೂ ಹಿಂದುಳಿದ ಸಮುದಾಯಗಳ ಮೇಲಿನ ಪ್ರಹಾರ ಎಂದು ವಿಪಕ್ಷ ಆರೋಪಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಯುನಿಫೈಯ್ಡ್ ಪೆನ್ಷನ್ ಯೋಜನೆ (UPS) ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಯುನಿಫೈಯ್ಡ್ ಪೆನ್ಷನ್ ಯೋಜನೆಯಲ್ಲಿ ಯು ಎಂದರೆ ಮೋದಿ ಸರ್ಕಾರದ ಯು-ಟರ್ನ್ ಎಂಬುದು ಅರ್ಥ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

UPS ದಲಿತರು, ಬುಡಕಟ್ತು ಹಾಗೂ ಹಿಂದುಳಿದ ಸಮುದಾಯಗಳ ಮೇಲಿನ ಪ್ರಹಾರ ಎಂದು ವಿಪಕ್ಷ ಆರೋಪಿಸಿದೆ. ಈ ವಿಷಯವಾಗಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೂ.04 ರ ನಂತರ ಪ್ರಧಾನಿಯ ಅಧಿಕಾರದ ಅಹಂಕಾರದ ಎದುರು ಜನರ ಶಕ್ತಿ ಮೇಲುಗೈ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೀರ್ಘಾವಧಿಯ ಬಂಡವಾಳ ಲಾಭ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ವಾಪಸ್ ಪಡೆದಿದ್ದು. ವಕ್ಫ್ ಬಿಲ್ ಅನ್ನು ಜೆಪಿಸಿಗೆ ಕಳುಹಿಸುವುದು. ಬ್ರಾಡ್‌ಕಾಸ್ಟ್ ಬಿಲ್‌ನ ಹಿಂತೆಗೆತ. ಲ್ಯಾಟರಲ್ ಎಂಟ್ರಿಯ ಹಿಂತೆಗೆತಗಳನ್ನು ಉಲ್ಲೇಖಿಸಿರುವ ಮಲ್ಲಿಕಾರ್ಜುನ ಖರ್ಗೆ, "ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಮತ್ತು ಈ ನಿರಂಕುಶ ಸರ್ಕಾರದಿಂದ 140 ಕೋಟಿ ಭಾರತೀಯರನ್ನು ರಕ್ಷಿಸುತ್ತೇವೆ" ಎಂದು ಬರೆದಿದ್ದಾರೆ. ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಯುಪಿಎಸ್ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೇಲಿನ ದಾಳಿಯನ್ನು ತೋರುತ್ತಿದೆ ಎಂದು ಆರೋಪಿಸಿದ್ದಾರೆ.

"ಹಲವು ರಾಜ್ಯಗಳಲ್ಲಿ, ಮೀಸಲು ವರ್ಗದ ಸರ್ಕಾರಿ ಉದ್ಯೋಗಗಳಿಗೆ ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು. UPSC ಯಲ್ಲಿ, ಈ ಮಿತಿ 37 ವರ್ಷಗಳು. ಏಕೀಕೃತ ಪಿಂಚಣಿ ಯೋಜನೆಯಡಿ, ಪೂರ್ಣ ಪಿಂಚಣಿ ಪಡೆಯಲು 25 ವರ್ಷಗಳ ಸೇವೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ". "ಈಗ ಸರ್ಕಾರವು ಹಿಂದುಳಿದವರಿಗೆ ಲಭ್ಯವಿರುವ ಗರಿಷ್ಠ ವಯೋಮಿತಿ ಸೌಲಭ್ಯವನ್ನು ಕೊನೆಗೊಳಿಸಲು ಬಯಸುತ್ತದೆಯೇ ಅಥವಾ ಪೂರ್ಣ ಪಿಂಚಣಿಯಿಂದ ವಂಚಿತರಾಗಲು ಬಯಸುತ್ತದೆಯೇ ಎಂದು ಹೇಳಬೇಕು?" ಖೇರಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಆದಾಗ್ಯೂ, ವೃತ್ತಿಪರರ ಕಾಂಗ್ರೆಸ್ ನ ವಿಭಾಗದ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ತಮ್ಮ ಪಕ್ಷದಿಂದ ಭಿನ್ನವಾದ ಅಭಿಪ್ರಾಯಪ ಪ್ರಕಟಿಸಿದ್ದಾರೆ ಮತ್ತು ಯೋಜನೆಯನ್ನು ಪರಿಚಯಿಸಿರುವುದು "ಸ್ವಾಗತ ಮತ್ತು ವಿವೇಕಯುತ" ಎಂದು ಹೇಳಿದ್ದಾರೆ.

"ಭಾರತದಲ್ಲಿ ಸರ್ಕಾರಿ ಸಿಬ್ಬಂದಿಗೆ ಪಿಂಚಣಿಯು ಬಹುಸಂಖ್ಯಾತ ಬಡವರಿಗೆ ಗಣ್ಯ ಅಲ್ಪಸಂಖ್ಯಾತರಿಗೆ ಪಾವತಿಸಲು ಸ್ವಾಭಾವಿಕವಾಗಿ ತೆರಿಗೆಯಾಗಿದೆ. ಆದ್ದರಿಂದ, OPS ಅನ್ನು 2013 ರಲ್ಲಿ NPS ಗೆ ಸುಧಾರಿಸಲಾಯಿತು. ಆದರೆ NPS ನಿವೃತ್ತ ಕುಟುಂಬಗಳಿಗೆ ಕನಿಷ್ಠ ಮೊತ್ತವನ್ನು ಭರವಸೆ ನೀಡಲಿಲ್ಲ" ಎಂದು ಚಕ್ರವರ್ತಿ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT