ಸಾವು (ಸಾಂಕೇತಿಕ ಚಿತ್ರ) online desk
ದೇಶ

ಜಾಸ್ತಿ ಮೊಬೈಲ್ ನೋಡಬೇಡ ಎಂದು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬಾಲಕಿ ಶವವಾಗಿ ಪತ್ತೆ!

ಡಿಸೆಂಬರ್ 5 ರಂದು, ಆಕೆಯ ತಾಯಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಬೇಡ ಮತ್ತು ಓದಿನ ಕಡೆ ಗಮನ ಹರಿಸುವಂತೆ ಬುದ್ದಿ ಹೇಳಿದ್ದರು.

ಥಾಣೆ: ಮೊಬೈಲ್ ಫೋನ್‌ ಹೆಚ್ಚು ನೋಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನೆಬಿಟ್ಟು ಹೋಗಿದ್ದ 15 ವರ್ಷದ ಬಾಲಕಿ ಒಂಬತ್ತು ದಿನಗಳ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಾಲಕಿ ತನ್ನ ಕುಟುಂಬದೊಂದಿಗೆ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಳು.

ಡಿಸೆಂಬರ್ 5 ರಂದು, ಆಕೆಯ ತಾಯಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಬೇಡ ಮತ್ತು ಓದಿನ ಕಡೆ ಗಮನ ಹರಿಸುವಂತೆ ಬುದ್ದಿ ಹೇಳಿದ್ದರು. ಇದರಿಂದ ಕೋಪಕೊಂಡ ಬಾಲಕಿ ಮನೆ ಬಿಟ್ಟು ಹೋಗಿದ್ದಳು ಎಂದು ವಿಷ್ಣುನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮಗಳು ವಾಪಸ್ ಮನೆಗೆ ಬರದಿದ್ದಾಗ ಆಕೆಯ ಕುಟುಂಬಸ್ಥರು ಮರುದಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಅಪಹರಣ ಆರೋಪದ ಮೇಲೆ ಮೇಲೆ ಎಫ್‌ಐಆರ್ ದಾಖಲಿಸಿದ್ದರು.

ಅಧಿಕಾರಿಯ ಪ್ರಕಾರ, ಡಿಸೆಂಬರ್ 5 ರಂದು ಡೊಂಬಿವಿಲಿಯ ಮೋಟಗಾಂವ್ ಸೇತುವೆಯಿಂದ ಬಾಲಕಿ ತೊರೆಗೆ ಹಾರಿದ್ದಾಳೆ ಎಂಬ ಸಂದೇಶ ಪೊಲೀಸರಿಗೆ ಬಂದಿತ್ತು.

ಶನಿವಾರ ಮಧ್ಯಾಹ್ನ, ಮೃತದೇಹ ತೊರೆಯಲ್ಲಿ ಪತ್ತೆಯಾಗಿದ್ದು, ಆಕೆಯ ಕುಟುಂಬದ ಸದಸ್ಯರು ಬಾಲಕಿಯನ್ನು ಗುರುತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಡೀ ವಿಶ್ವವೇ ಕರ್ನಾಟಕವನ್ನು ಗಮನಿಸುತ್ತಿದೆ, ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಹಕಾರ ಬೇಕು: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಮೋದಿ ಹೇಳಿದ್ದನ್ನು ನಾನು ಒಪ್ಪುತ್ತೇನೆ; ಬಿಜೆಪಿ ನಾಯಕರೂ ಪ್ರಧಾನಿ ಹೇಳಿದಂತೆ ಕೇಳಲಿ; ರಾಜ್ ಠಾಕ್ರೆ

600 ಬಿಲಿಯನ್ ನಷ್ಟ: ಒಂದೇ ವಾರದಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ Elan Musk!

ಕಾಲಿನ ಕೆಳಗೆ ಶ್ರೀರಾಮನ ಫೋಟೋ? ಸಂಸತ್​ ಆವರಣದಲ್ಲಿ 'ಚಂದ ಚೋರಿ' ಸ್ಕಿಟ್ ಮಾಡಿದ ರಾಹುಲ್, ಇತರ ಇಬ್ಬರು ಸಂಸದರ ವಿರುದ್ಧ ಕೇಸ್