ಮನಮೋಹನ್ ಸಿಂಗ್ ಅವರ ಜೊತೆಗೆ ಆಸಿಮ್ ಅರುಣ್  
ದೇಶ

ಸರ್ಕಾರ ಕೊಟ್ಟಿದ್ದ BMW ಕಾರು ಇದ್ದರೂ, ಮನಮೋಹನ್ ಸಿಂಗ್‌ಗೆ 'ಮಾರುತಿ 800' ಅಂದ್ರೆ ತುಂಬಾ ಪ್ರೀತಿ!

ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಮತ್ತು ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಮಾಜಿ ಮುಖ್ಯಸ್ಥ ಅಸೀಮ್ ಅರುಣ್ ಅವರು ಸಿಂಗ್ ಅವರಿಗೆ 'ಮಾರುತಿ 800' ಕಾರಿನೊಂದಿಗಿನ ವಿಶೇಷ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ.

ನವದೆಹಲಿ: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಮತ್ತು ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಮಾಜಿ ಮುಖ್ಯಸ್ಥ ಆಸಿಮ್ ಅರುಣ್ ಅವರು ಸಿಂಗ್ ಅವರಿಗೆ 'ಮಾರುತಿ 800' ಕಾರಿನೊಂದಿಗಿನ ವಿಶೇಷ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ.

ಈಗ ಉತ್ತರ ಪ್ರದೇಶದ ಕನ್ನೌಜ್ ಸದರ್‌ನಿಂದ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಆಸಿಮ್ ಅರುಣ್ ಅವರು ದೆಹಲಿಯ ಏಮ್ಸ್‌ನಲ್ಲಿ 92 ವರ್ಷದ ಮನಮೋಹನ್ ಸಿಂಗ್ ನಿಧನರಾದ ಒಂದು ದಿನದ ನಂತರ ಅವರೊಂದಿಗಿನ ನೆನಪುಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಅರ್ಥಶಾಸ್ತ್ರಜ್ಞನಿಂದ ರಾಜಕಾರಣಿಯಾಗಿ ಬದಲಾದ ಮನಮೋಹನ್ ಸಿಂಗ್ ಅವರು ಕೇವಲ ಒಂದು ಕಾರನ್ನು ಮಾತ್ರ ಹೊಂದಿದ್ದರು. ಅದುವೇ ಮಾರುತಿ 800.

'ನಾನು 2004 ರಿಂದ ಸುಮಾರು ಮೂರು ವರ್ಷಗಳ ಕಾಲ ಅವರ ಅಂಗರಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ವಿಶೇಷ ರಕ್ಷಣಾ ಗುಂಪು (SPG) ಪ್ರಧಾನ ಮಂತ್ರಿಗೆ ಅತ್ಯಂತ ನಿಕಟ ಭದ್ರತೆಯನ್ನು ಒದಗಿಸುತ್ತದೆ. ನಿಕಟ ರಕ್ಷಣಾ ತಂಡವನ್ನು ಮುನ್ನಡೆಸುವ ಅವಕಾಶ ನನ್ನದಾಗಿತ್ತು. ನಿಕಟ ಭದ್ರತಾ ತಂಡದ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ನಾನು ಪ್ರಧಾನಿಯಿಂದ ದೂರವಿರಲಿಲ್ಲ. ಪ್ರಧಾನಿಯ ಜೊತೆಯಲ್ಲೇ ಇರುವುದಕ್ಕೆ ಒಬ್ಬ ಅಂಗರಕ್ಷಕನಿಗೆ ಮಾತ್ರ ಅವಕಾಶವಿತ್ತು. ಅದು ನನ್ನ ಪಾಲಾಗಿತ್ತು. ಆದ್ದರಿಂದ ಸಿಂಗ್ ಅವರೊಂದಿಗೆ ನೆರಳಿನಂತೆ ನಾನಿದ್ದೆ ಎಂದು ಆಸಿಮ್ ಅರುಣ್ ಬರೆದುಕೊಂಡಿದ್ದಾರೆ.

'ಮನಮೋಹನ್ ಸಿಂಗ್ ಅವರು ಕೇವಲ 'ಮಾರುತಿ 800' ಕಾರನ್ನು ಹೊಂದಿದ್ದರು. ಪ್ರಧಾನಿ ನಿವಾಸದಲ್ಲಿ ಈ ಕಾರು ಮಿನುಗುತ್ತಿರುವ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರುಗಳ ಹಿಂದೆ ನಿಲ್ಲಿಸಲಾಗಿರುತ್ತಿತ್ತು. 'ಆಸಿಮ್, ನನಗೆ ಈ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ; ನನ್ನ ವಾಹನ ಇದು (ಮಾರುತಿ) ಎಂದು ಅವರು ಆಗ್ಗಾಗ್ಗೆ ನನಗೆ ಹೇಳುತ್ತಿದ್ದರು. ಈ ಕಾರು ನಿಮ್ಮ ಐಷಾರಾಮಿ ಜೀವನಕ್ಕಾಗಿ ಅಲ್ಲ ಆದರೆ, SPG ಗೆ ಅಗತ್ಯವಿರುವ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನಾನು ವಿವರಿಸುತ್ತಿದ್ದೆ. ಆದರೆ, ಮಾರುತಿ ಕಾರಿನ ಸಮೀಪ ಬೆಂಗಾವಲು ಪಡೆ ಹಾದುಹೋದಾಗಲೆಲ್ಲ, ನಾನು ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುವ ಮಧ್ಯಮ ವರ್ಗದ ವ್ಯಕ್ತಿ ಎಂದು ತನ್ನ ಗುರುತನ್ನು ಪುನರುಚ್ಚರಿಸುವಂತೆ ಹಂಬಲದಿಂದ ಅವರು ಅದನ್ನೇ ನೋಡುತ್ತಿದ್ದರು. 'ದುಬಾರಿ ಕಾರುಗಳು ಪ್ರಧಾನಿಯವರದ್ದು; ನನ್ನದು ಈ ಮಾರುತಿ' ಎಂದು ಹೇಳುತ್ತಿದ್ದರು' ಎಂದಿದ್ದಾರೆ.

ಶಾಂತ ನಡವಳಿಕೆ, ನಮ್ರತೆ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾದ ಮನಮೋಹನ್ ಸಿಂಗ್, 1991 ರಲ್ಲಿ ಹಣಕಾಸು ಸಚಿವರಾಗಿ ಆರ್ಥಿಕ ಸುಧಾರಣೆಯ ದಾರಿದೀಪವಾದರು ಮತ್ತು ನಂತರ 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT