ವಿಜಯ್-ಆರ್ ಎನ್ ರವಿ TNIE
ದೇಶ

ಲೈಂಗಿಕ ಕಿರುಕುಳ: ನನ್ನ ಸಹೋದರಿಯರ ಸುರಕ್ಷತೆ ಮುಖ್ಯ; ರಾಜ್ಯಪಾಲರನ್ನು ಭೇಟಿಯಾದ TVK ಅಧ್ಯಕ್ಷ ನಟ ವಿಜಯ್!

ಯಾವುದರ ಬಗ್ಗೆಯೂ ಚಿಂತಿಸಬೇಡಿ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ನಾವು ಸುರಕ್ಷಿತ ತಮಿಳುನಾಡನ್ನು ರಚಿಸುತ್ತೇವೆ.

ಚೆನ್ನೈ: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತ ಆಕ್ರೋಶದ ನಡುವೆಯೇ, ನಟ-ರಾಜಕಾರಣಿ ವಿಜಯ್ ಅವರು ತಮಿಳುನಾಡು ರಾಜಭವನದ ಬಾಗಿಲು ತಟ್ಟಿದ್ದಾರೆ. ರಾಜ್ಯಪಾಲ ಆರ್.ಎನ್ ರವಿ ಅವರನ್ನು ಭೇಟಿಯಾದ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವರಿಷ್ಠ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಟಿವಿಕೆ ಪ್ರಕಟಣೆಯ ಪ್ರಕಾರ, ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಎಲ್ಲೆಡೆ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು, ಫಂಜಾಲ್ ಚಂಡಮಾರುತದ ಪರಿಹಾರಕ್ಕಾಗಿ ಕೇಂದ್ರದ ಹಣವನ್ನು ಬಿಡುಗಡೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರು ಒತ್ತಾಯಿಸಿದ್ದಾರೆ ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್.ಆನಂದ್ ತಿಳಿಸಿದ್ದಾರೆ.

ತಮ್ಮ ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಪ್ರೀತಿಯ ಸಹೋದರಿಯರೇ" ಎಂದು ಬರೆದಿರುವ ಕೈಬರಹದ ಪತ್ರದಲ್ಲಿ, "ನಮ್ಮನ್ನು ನಿಯಂತ್ರಿಸುವವರಿಗೆ ನಾವು ಎಷ್ಟು ಬಾರಿ ಕೇಳಿದರೂ ಕೇಳುವುದು ವ್ಯರ್ಥ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿದಿನ ಮಹಿಳೆಯರ ಮೇಲೆ ಸಾಮೂಹಿಕ ದೌರ್ಜನ್ಯಗಳು, ಅವ್ಯವಸ್ಥೆಯ ನಡವಳಿಕೆ ಮತ್ತು ಲೈಂಗಿಕ ಅಪರಾಧಗಳಿಗೆ ಬಲಿಯಾಗುತ್ತಾರೆ. ಅವರ ಸಹೋದರನಾಗಿ ನಾನು ಅವರ ದುಃಖವನ್ನು ನೋಡಿದ ನಂತರ ಖಿನ್ನತೆ ಮತ್ತು ವರ್ಣನಾತೀತ ನೋವು ಅನುಭವಿಸುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಿಂತು ನಿಮ್ಮನ್ನು ಸಹೋದರನಂತೆ ರಕ್ಷಿಸುತ್ತೇನೆ ಎಂದು ವಿಜಯ್ ಭರವಸೆ ನೀಡಿದ್ದಾರೆ.

ಯಾವುದರ ಬಗ್ಗೆಯೂ ಚಿಂತಿಸಬೇಡಿ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ನಾವು ಸುರಕ್ಷಿತ ತಮಿಳುನಾಡನ್ನು ರಚಿಸುತ್ತೇವೆ. ನಾವು ಇದನ್ನು ಶೀಘ್ರದಲ್ಲೇ ಒಟ್ಟಾಗಿ ಖಚಿತಪಡಿಸುತ್ತೇವೆ ಎಂದು ಬರೆದಿದ್ದಾರೆ. ಇದೇ ವೇಳೆ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ರಾಜ್ಯಪಾಲರೊಂದಿಗಿನ ವಿಜಯ್ ಅವರ ಭೇಟಿಯನ್ನು ಸ್ವಾಗತಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳ ಪದಾಧಿಕಾರಿಗಳು ಸಹೋದರರಂತೆ ಮುಂದೆ ಬರಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT