ದೇಶ

ಹೇಮಂತ್ ಸೋರೆನ್ ಗೆ ಒಂದು ದಿನ ನ್ಯಾಯಾಂಗ ಬಂಧನ, ಇಡಿ ಕಸ್ಟಡಿಗೆ ನೀಡುವ ಬಗ್ಗೆ ನಾಳೆ ನಿರ್ಧಾರ

Lingaraj Badiger

ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ರಾಂಚಿಯ ವಿಶೇಷ ನ್ಯಾಯಾಲಯ ಗುರುವಾರ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಯನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡುವ ಬಗ್ಗೆ ಶುಕ್ರವಾರ ನಿರ್ಧರಿಸಲಿದೆ.

ತೀವ್ರ ವಿಚಾರಣೆಯ ಬಳಿಕ ನಿನ್ನೆ ತಡರಾತ್ರಿ ಸೋರೆನ್ ಅವರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆ ರಾಂಚಿ ವಿಶೇಷ ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.

ಆರೋಪಿಯ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, ಶುಕ್ರವಾರದ ನಂತರ 10 ದಿನಗಳ ಕಸ್ಟಡಿಗೆ ನೀಡುವ ಇಡಿ ಕೋರಿಕೆಯ ಕುರಿತು ನ್ಯಾಯಾಲಯ ಆದೇಶ ನೀಡುವ ಸಾಧ್ಯತೆಯಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೋರೆನ್ ಅವರು ರಾಜ್ಯದಲ್ಲಿ ನಡೆದ 600 ಕೋಟಿ ಭೂ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

SCROLL FOR NEXT