ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ಮಹಾರಾಷ್ಟ್ರ: ಚವಾಣ್ ನಿರ್ಗಮನದ ಬೆನ್ನಲ್ಲೇ ಕಾಂಗ್ರೆಸ್ ಸಭೆಗೆ ಐವರು ಶಾಸಕರ ಗೈರು!

Nagaraja AB

ಮುಂಬೈ: ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಉನ್ನತ ಮಟ್ಟದ ನಿರ್ಗಮನದ ನಂತರ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಶಾಸಕರ ಸಭೆಗೆ ಕನಿಷ್ಠ ಐವರು ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಇದು ಪಕ್ಷಾಂತರದ ಊಹಾಪೋಹಕ್ಕೆ ಕಾರಣವಾಗಿದೆ.

ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆದ ಸಭೆಗೆ ಝೀಶನ್ ಸಿದ್ದಿಕ್ (ಬಾಂದ್ರಾ ಪೂರ್ವ), ಅಸ್ಲಾಮ್ ಶೇಖ್ (ಮಲಾಡ್ ಪಶ್ಚಿಮ), ಅಮಿತ್ ದೇಶಮುಖ್ (ಲಾತೂರ್ ಸಿಟಿ), ಸುಲ್ಭಾ ಖೋಡ್ಕೆ (ಅಮರಾವತಿ) ಮತ್ತು ಮೋಹನರಾವ್ ಹಂಬರ್ಡೆ (ನಾಂದೇಡ್ ದಕ್ಷಿಣ) ಹಾಜರಾಗಲಿಲ್ಲ.

ಅನುಮತಿ ಪಡೆದ ನಂತರ ಎಲ್ಲಾ ಐವರು ಶಾಸಕರು ಗೈರು ಹಾಜರಾಗಿದ್ದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ. ಶಾಸಕರು ಪೂರ್ವ ನಿರ್ಧರಿತ ಕಾರಣದಿಂದ ಸಭೆಯಿಂದ ಹೊರಗುಳಿಯಲು ಅನುಮತಿ ಕೇಳಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸಹ ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಚಂದ್ರಕಾಂತ್ ಹಂದೋರೆ ಅವರ ಪ್ರಸ್ತಾವಕರಾಗಿ ಸಿದ್ದಿಕ್ ಮತ್ತು ಶೇಖ್ ಇಬ್ಬರೂ ಸಹಿ ಹಾಕಿದ್ದಾರೆ ಮತ್ತು ಬುಧವಾರ ಸಂಜೆ ಪಕ್ಷದ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಸಿದ್ದಿಕ್ ತಂದೆ ಬಾಬಾ ಸಿದ್ದಿಕ್ ಕಳೆದ ವಾರ ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ್ದರು.ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ನಾಯಕರಾದ ಅಜಯ್ ಚೌಧರಿ (ಶಿವಸೇನೆ ಯುಬಿಟಿ) ಮತ್ತು ಜಿತೇಂದ್ರ ಅವ್ಹಾದ್ (ಶರದ್ ಪವಾರ್ ನೇತೃತ್ವದ ಎನ್‌ಸಿಪಿ) ಕೂಡ ಹಂದೋರೆ ಅವರ ನಾಮಪತ್ರ ಸಲ್ಲಿಸುವ ಮೊದಲು ಕರೆದ ಸಭೆಗೆ ಹಾಜರಿದ್ದರು.

SCROLL FOR NEXT