ರಾಹುಲ್ ಗಾಂಧಿ-ಅರವಿಂದ್ ಕೇಜ್ರಿವಾಲ್
ರಾಹುಲ್ ಗಾಂಧಿ-ಅರವಿಂದ್ ಕೇಜ್ರಿವಾಲ್ PTI
ದೇಶ

ಲೋಕಸಭೆ ಚುನಾವಣೆ; ಪಂಜಾಬ್‌ನಲ್ಲಿ ಆಪ್-ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಸಿಎಂ ಕೇಜ್ರಿವಾಲ್

Vishwanath S

ಲೋಕಸಭೆ ಚುನಾವಣೆ 2024ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ 'INDIA' ಮೈತ್ರಿಯನ್ನು ರಚಿಸಿಕೊಂಡಿದ್ದವು. ಆದರೆ ಈ ಚುನಾವಣೆಗೂ ಮುನ್ನವೇ ಈ ಮಹಾಮೈತ್ರಿಕೂಟ ಬಿರುಕು ಬಿಟ್ಟಿದೆ.

ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಆಪ್ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಘೋಷಿಸಿದ್ದರು. ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಆಪ್ ಮತ್ತು ಕಾಂಗ್ರೆಸ್ ನಿರ್ಧಾರವನ್ನು ಪರಸ್ಪರ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರತಿಪಕ್ಷಗಳ ಮೈತ್ರಿಯನ್ನು ಅವಕಾಶವಾದಿ ಎಂದು ಬಣ್ಣಿಸಿದೆ.

ಎಎಪಿ-ಕಾಂಗ್ರೆಸ್ ಪರಸ್ಪರ ಒಪ್ಪಿಗೆಯೊಂದಿಗೆ ನಿರ್ಧಾರ ತೆಗೆದುಕೊಂಡಿವೆ. ಪಂಜಾಬ್‌ನಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ಆಪ್ ನಿರ್ಧಾರದ ಕುರಿತು ಚರ್ಚಿಸಲು ಬಂದಿದ್ದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಜೊತೆ ಚರ್ಚಿಸಲಾಗಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಲ್ಲಿ ಯಾವುದೇ ದ್ವೇಷವಿಲ್ಲ ಎಂದರು.

ದೆಹಲಿಯಲ್ಲಿ ಸೀಟು ಹಂಚಿಕೆ ಕುರಿತು ಎಎಪಿ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು. ಏಕೆಂದರೆ ದೆಹಲಿಯಲ್ಲಿ ಈ ಎರಡು ಪಕ್ಷಗಳು ಒಂದಾಗದಿದ್ದರೆ ಬಿಜೆಪಿ ಗೆಲುವು ಸುಲಭವಾಗುತ್ತವೆ. ಒಂದು ದಶಕದಿಂದ, ರಾಷ್ಟ್ರ ರಾಜಧಾನಿಯ ಎಲ್ಲಾ ಏಳು ಸಂಸದೀಯ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದ ಎಲ್ಲಾ 13 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಎಎಪಿ ನಿರ್ಧಾರವನ್ನು ಘೋಷಿಸಿದಾಗ, ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಹಳೆಯ ಪಕ್ಷವು ಬಯಸಿದ್ದು ಇದನ್ನೇ ಎಂದು ಹೇಳಿದ್ದರು.

SCROLL FOR NEXT